ಕಲ್ಲಿನಿಂದ ಜಜ್ಜಿ ಮಗನ ಕೊಲೆ

9BGV_KITTUR2
ಮಂಜುನಾಥ ಉಳ್ಳಾಗಡ್ಡಿ
Published on

ಚನ್ನಮ್ಮನ ಕಿತ್ತೂರು: ಅಪ್ಪ ಮತ್ತು ಹಿರಿಯ ಮಗ ಸೇರಿ ಕಿರಿಯ ಮಗನನ್ನು ಕೊಲೆ ಮಾಡಿರುವ ಟನೆ ತಾಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ಚಿಕ್ಕನಂದಿಹಳ್ಳಿ ಗ್ರಾಮದ ಮಂಜುನಾಥ ಉಳ್ಳಾಗಡ್ಡಿ (25) ಕೊಲೆಯಾದವ. ಇತನ ತಂದೆ ನಾಗಪ್ಪ ಉಳ್ಳಾಗಡ್ಡಿ, ಹಿರಿಯ ಮಗ ಗುರುಬಸಪ್ಪ ಉಳ್ಳಾಗಡ್ಡಿ ಕೊಲೆ ಆರೋಪಿಗಳು.

ಸೇನೆಯಲ್ಲಿದ್ದ ಗುರುಬಸಪ್ಪ ಎರಡು ದಿನಗಳ ಹಿಂದೆ ರಜೆ ಮೇಲೆ ಸ್ವಗ್ರಾಮಕ್ಕೆ ಬಂದಿದ್ದಾನೆ. ಕೊಲೆಗೀಡಾದ ಮಂಜುನಾಥ ಅನ್ಯ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದ. ಇದಕ್ಕೆ ಕುಟುಂಬಸ್ಥರು ನಿರಾಕರಿಸಿದ್ದರು. ಇದರಿಂದ ಮಂಜುನಾಥ "ಹಿರಿಯ ಮಗನ ಮದುವೆ ಫಿಕ್ಸ್​ ಮಾಡಿದ್ದೀರಿ, ನನ್ನ ಮದುವೆ ಯಾವಾಗ' ಎಂದು ಪ್ರಶ್ನಿಸಿದ್ದಾನೆ. ಇದು ವಿಕೋಪಕ್ಕೆ ತಿರುಗಿದ್ದು, ಆರೋಪಿತರು ಮಂಜುನಾಥನ ತಲೆಗೆ ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಬೈಲಹೊಂಗಲ ಡಿವೈಎಸ್ಪಿ ರವಿ ನಾಯಕ, ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್​ಐ ಪ್ರವಿಣ ಗಂಗೊಳ ಭೇಟಿ ಪರಿಶೀಲಿಸಿದ್ದಾರೆ. ಕಿತ್ತೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

9ಕಿತ್ತೂರ2: ಮಂಜುನಾಥ ಉಳ್ಳಾಗಡ್ಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net