ಕಲ್ಲಿನಾಯಕನಹಳ್ಳಿ ಬೆಟ್ಟದಲ್ಲಿದ್ದ ಶಿಲುಬೆಗಳ ತೆರವು

IMG-20200911-WA0065
Published on

ಗೌರಿಬಿದನೂರು : ಹೈಕೋರ್ಟ್ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ಕಲ್ಲಿನಾಯಕನಹಳ್ಳಿ ಸಮೀಪದ ಬೆಟ್ಟದ ಗೋಮಾಳದಲ್ಲಿ ಸ್ಥಾಪಿಸಿದ್ದ ಶಿಲುಬೆಗಳನ್ನು ತಾಲೂಕು ಆಡಳಿತ ಶುಕ್ರವಾರ ತೆರವುಗೊಳಿಸಿದೆ.

ಬೆಂಗಳೂರು ಹಿಂದುಪುರ ಹೆದ್ದಾರಿ ಹಾಗೂ ರೈಲ್ವೆ ಹಳಿಗೆ ಸಮೀಪದ ಸರ್ವೇ ನಂ.106ರಲ್ಲಿ 42 ಎಕರೆ ಗೋಮಾಳ ಇದ್ದು ಇಲ್ಲಿ ಕೆಲವರು ಶಿಲುಬೆ ನೆಟ್ಟಿದ್ದರು.

ತಾಲೂಕಿನ ಡಿ.ಎ.ಸ್ವಾಗತ್ ಹಾಗೂ ಕೆ.ಎ.ಲೋಕೇಶ್ ಎಂಬುವರು ಈ ಕುರಿತು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಸರ್ಕಾರಿ ಜಮೀನು ಕಬಳಿಸುವ ಉದ್ದೇಶದಿಂದ ಕೆಲವರು ಈ ರೀತಿಯ ಚಟುವಟಿಕೆ ನಡೆಸುತ್ತಿದ್ದಾರೆ. ಈ ವಿಷಯ ಮುಂದೆ ಧಾರ್ಮಿಕ ಬಣ್ಣ ಪಡೆಯುವ ಸಾಧ್ಯತೆ ಇದೆ. ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದೇ ಬೆಟ್ಟದ ಮೇಲೆ ಅಕ್ರಮ ಚಟುವಟಿಕೆಗಳು ನಡೆಯಲು ಕಾರಣ. ಆದ್ದರಿಂದ ಶಿಲುಬೆಗಳನ್ನು ತೆರವುಗೊಳಿಸಬೇಕು ಎಂದು ಕೋರಿದ್ದರು.

ಅರ್ಜಿದಾರರ ವಾದ ಆಲಿಸಿದ ನ್ಯಾಯಾಲಯ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ವಕೀಲ ಮಧುಸೂದನ್ ಜೀ ಅಡಿಗ ಅರ್ಜಿದಾರರ ಪರ ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net