ಕಲ್ಲಿನಲ್ಲಿ ಕಲೆ ಅರಳಿಸಿದ ವಿಶಿಷ್ಠ ಸಾಧಕ; ಭರತಖಂಡದ ಮೊದಲ ಇಂಜಿನಿಯರ್ ವಿಶ್ವಕರ್ಮ

SGR WEB !!
Published on

ಸಾಗರ: ಭರತಖಂಡದ ಮೊದಲ ಇಂಜಿನಿಯರ್ ವಿಶ್ವಕರ್ಮ. ವಾಸ್ತುಶಿಲ್ಪದ ಅರಿವೆ ಇಲ್ಲದ ಸಂದರ್ಭದಲ್ಲಿ ಅನೇಕ ಸುಂದರ ಭವನಗಳನ್ನು ನಿರ್ಮಿಸಿದ ಹೆಗ್ಗಳಿಕೆ ವಿಶ್ವಕರ್ಮ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶನಿವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶ್ರಿ ವಿಶ್ವಕರ್ಮ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

ವಿಶ್ವಕರ್ಮರು ಸ್ವರ್ಣಲಂಕೆ, ಮಥುರಾ, ಇಂದ್ರಪ್ರಸ್ಥದಂತಹ ಅರಮನೆಗಳನ್ನು ರಚಿಸುವ ಮೂಲಕ ಜನಮೆಚ್ಚುಗೆಗೆ ಒಳಗಾಗಿದ್ದಾರೆ. ಇಂದ್ರನಿಗೆ ವಜ್ರಾಯುಧವನ್ನು ನೀಡಿದವರು ವಿಶ್ವಕರ್ಮರು. ಕಲ್ಲಿನಲ್ಲಿ ಕಲೆಯನ್ನು ಅರಳಿಸುವ ವಿಶೇಷ ಶಕ್ತಿ ವಿಶ್ವಕರ್ಮರ ಮೂಲಕ ಜನಾಂಗಕ್ಕೆ ಒಲಿದು ಬಂದಿದೆ. ದೇಶಾದ್ಯಂತ ಅನೇಕ ಶಿಲ್ಪಕಲಾ ಕೆತ್ತನೆಯನ್ನು ನಾವು ನೋಡುತ್ತೇವೆ. ಇದರ ಹಿಂದೆ ವಿಶ್ವಕರ್ಮ ಜನಾಂಗದವರ ಪರಿಶ್ರಮ ಎದ್ದು ಕಾಣುತ್ತದೆ ಎಂದು ತಿಳಿಸಿದರು.

ವಿಶ್ವಕರ್ಮರು ಯಾವುದೇ ಒಂದು ಜನಾಂಗ ಸೀಮಿತವಾದವರಲ್ಲ. ಐದು ಸಾವಿರ ವರ್ಷಗಳ ಹಿಂದೆ ವಿಶ್ವಕರ್ಮರು ಜಗತ್ತಿಗೆ ಕಲೆಯ ಪರಿಚಯ ಮಾಡಿಸಿದ್ದಾರೆ. ಇಂತಹ ಶ್ರೇಷ್ಠ ಕಲೆಯನ್ನು ಜನಾಂಗದ ಬಾಂಧವರು ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಅದಕ್ಕೆ ಬೇಕಾದ ಎಲ್ಲ ರೀತಿಯ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net