ಕಲ್ಲಿನ ಖಣಿಗೆ ಬಿದ್ದ ಗೋವಿನ ರಕ್ಷಣೆ

IMG-20201023-WA0112
Published on

ವಿಜಯಪುರ: ಆಳವಾದ ಕಲ್ಲಿನ ಖಣಿಯಲ್ಲಿ ಬಿದ್ದಿದ್ದ ಆಕಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಶುಕ್ರವಾರ ರಕ್ಷಿಸಿದ್ದಾರೆ. ವಿಜಯಪುರ ನಗರದ ಆಶ್ರಮ ರಸ್ತೆಯಲ್ಲಿರುವ ಹಳೆಯ ಕಲ್ಲಿನ ಖಣಿಯಲ್ಲಿ ಗುರುವಾರ ರಾತ್ರಿ ಬಿದ್ದಿದೆ. ಆಹಾರ ಅರಸಿ ಬಂದ ಹಸು ಕಲ್ಲಿನ ಖಣಿಯಲ್ಲಿ ಬಿದ್ದಿರುವ ಬಗ್ಗೆ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಪಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಜೆ. ಎಂ.ಅತ್ತಾರ ನೇತೃತ್ವದಲ್ಲಿ ಜೀವದ ಹಂಗು ತೊರೆದು ಖಣಿಗೆ ಇಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಗೋವನ್ನು ರಕ್ಷಣೆ ಮಾಡಿದ್ದಾರೆ. ನಂತರ ಹಸುವನ್ನು ಕಗ್ಗೋಡ ಗೋಶಾಲೆಗೆ ರವಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net