ಕಲ್ಲಿಗೆ ರೂಪ ಕೊಡುವ ವಿಶ್ವಕರ್ಮ ಸಮುದಾಯ

S 17 CPTN 1
Published on

ಚನ್ನರಾಯಪಟ್ಟಣ : ಕಲ್ಲಿಗೆ ಒಂದು ರೂಪ ಕೊಡುವವರು ವಿಶ್ವಕರ್ಮ ಸಮುದಾಯದವರು. ಚಿನ್ನ, ಬೆಳ್ಳಿ ವ್ಯಾಪಾರದ ಜತೆಗೆ ಇದನ್ನೂ ಮಾಡುತ್ತಿರುವುದು ಶ್ಲಾಘನೀಯ ಎಂದು ವಿಶ್ವಕರ್ಮ ಮುಖಂಡ ಪುರೋಹಿತ ಮಂಜುನಾಥ್ ತಿಳಿಸಿದರು.

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ನಲ್ಲೂರಿನಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದರು. ಸಮಾಜದ ಜನಸಂಖ್ಯೆ ಕಡಿಮೆ ಇದೆ. ಹಾಗಾಗಿ ಈ ಸಮುದಾಯದವರಿಗೆ ಹೆಚ್ಚಿನ ಸೌಲಭ್ಯ ದೊರೆಯುವಂತೆ ಆಗಬೇಕು ಎಂದು ಮನವಿ ಮಾಡಿದರು.

ದೇಶದಲ್ಲಿರುವ ಎಲ್ಲ ಧರ್ಮಗಳ ಹಾಗೂ ಎಲ್ಲ ಜಾತಿಗಳ ಗುಡಿ-ಗೋಪುರಗಳನ್ನು ಕಟ್ಟಿ ದೇವಾನು ದೇವತೆಗಳ ಮೂರ್ತಿಗಳನ್ನು ಮಾಡಿ ಕೊಟ್ಟಿರುವವರು ವಿಶ್ವಕರ್ಮರು. ಸೃಷ್ಟಿಕರ್ತ ವಿಶ್ವಕರ್ಮನ ಮೂರ್ತಿಯನ್ನು ಪ್ರತಿಯೊಬ್ಬರೂ ಪೂಜಿಸುತ್ತೇವೆ. ಸಮಾಜದ ಸಾಕಷ್ಟು ಜನರು ಗ್ರಾಮಗಳಲ್ಲಿ ನೆಲೆಸಿದ್ದಾರೆ. ಅವರೆಲ್ಲರಿಗೂ ಸರ್ಕಾರದ ಎಲ್ಲ ಸೌಲಭ್ಯಗಳು ಸಿಗುವಂತೆ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಎಂಪಿಸಿಎಸ್ ಕಾರ್ಯದರ್ಶಿ ಶ್ರೀನಿವಾಸ್‌ಮೂರ್ತಿ ಮಾತನಾಡಿ, ಹಂಪೆ, ಬೇಲೂರು, ಹಳೇಬೀಡು, ಸೋಮನಾಥಪುರ ಇತರೆ ಕಡೆಗಳಲ್ಲಿ ಶಿಲ್ಪಕಲೆಯು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಡೀ ರಾಷ್ಟ್ರದಲ್ಲಿ 101 ಅಡಿ ಎತ್ತರದ ಪಂಚಮುಖ ಏಕಶಿಲಾ ವಿಶ್ವಕರ್ಮ ಪ್ರತಿಮೆ ಆಗುತ್ತಿದೆ. ಇದನ್ನು ತಾಲೂಕಿನ ಕೊಯಿರಾ ಕಲ್ಲಿನಿಂದ ಕೆತ್ತಲಾಗುತ್ತಿದೆ. ಇದು ಕೂಡ ವಿಶ್ವದಾಖಲೆಯಾಗಲಿದೆ ಎಂದರು.

ಶಿಕ್ಷಕ ಮಂಜುನಾಥಾಚಾರ್, ವಿಶ್ವಕರ್ಮ ಮುಖಂಡರಾದ ರಾಜಣ್ಣಚಾರ್, ಮನೋಹರ್, ಮಂಜುನಾಥ್, ಗಣೇಶಾಚಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net