

ಹೊಳೆನರಸೀಪುರ: ತಾಲೂಕಿನ ಹಳ್ಳಿ ಮೈಸೂರು ಹೋಬಳಿಯ ಕಲ್ಲಹಳ್ಳಿ ಗ್ರಾಮದಲ್ಲಿ ಕೋತಿಗಳ ಹಾವಳಿ ಮಿತಿ ಮೀರಿದ್ದು, ಅವುಗಳನ್ನು ಹಿಡಿದು ಬೇರೆಡೆ ಸಾಗಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಲ್ಲಹಳ್ಳಿ ಗ್ರಾಮದ ಕೆ.ಬಿ.ಚನ್ನಬಸಪ್ಪ ಅವರ ತೋಟಕ್ಕೆ ಸುಮಾರು 25 ಕೋತಿಗಳ ಹಿಂಡು ಲಗ್ಗೆ ಇಟ್ಟು ತಿಂಗಳಿಂದ ಬೀಡು ಬಿಟ್ಟು ತೋಟದಲ್ಲಿರುವ ಹಣ್ಣು-ಹಂಪಲು, ತೆಂಗು, ಅಡಕೆ ಫಸಲನ್ನು ತಿಂದು, ಕೆಡವಿ ನಾಶಪಡಿಸಿವೆ.
ತೋಟದ ಮಾಲೀಕ ಕೋತಿಗಳನ್ನು ಓಡಿಸಲು ಎಷ್ಟೇ ಪ್ರಯತ್ನ ಪಟ್ಟರೂ ತೋಟದಿಂದ ಹೊರ ಹೋಗುತ್ತಿಲ್ಲ. ಇದಲ್ಲದೆ ಕೋತಿಗಳು ಇರುವ ಭಯದಿಂದ ಕೂಲಿ ಕಾರ್ಮಿಕರೂ ಕೆಲಸಕ್ಕೆ ಬರಲಿ ಹೆದರುತ್ತಿದ್ದಾರೆ.
ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕೋತಿಗಳನ್ನು ಸೆರೆಹಿಡಿಸಿ ಕೋತಿಗಳ ಹಾವಳಿಯಿಂದ ನಮ್ಮ ತೋಟವನ್ನು ರಕ್ಷಿಸಿ ಕೊಡುವಂತೆ ತೋಟದ ರೈತ ಯಶವಂತ ಎಂಬುವರು ಮನವಿ ಮಾಡಿದ್ದಾರೆ.