

ಕಲ್ಲಪ್ಪಣ್ಣಾ ಅವಾಡೆ ಜನತಾ ಬ್ಯಾಂಕಿಗೆ 55 ಕೋಟಿ ಲಾಭ
ಚಿಕ್ಕೋಡಿ : ಇಂಚಲಕರಜಿಯ ಕಲ್ಲಪ್ಪಣ್ಣಾ ಅವಾಡೆ ಜನತಾ ಬ್ಯಾಂಕ್ 2024-25ನೇ ಸಾಲಿನಲ್ಲಿ 4708 ಕೋಟಿ ರೂ. ವಾರ್ಷಿಕ ವ್ಯವಹಾರದೊಂದಿಗೆ ಬ್ಯಾಂಕಿನ 65 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ದಾಖಲೆ 55 ಕೋಟಿ ರೂ.ಲಾಭ ಗಳಿಸಿದೆ ಎಂದು ಬ್ಯಾಂಕ್ ನ ಅಧ್ಯಕ್ಷ ಸ್ಟಪ್ಟಿಲ್ ಅವಾಡೆ ಮಾಹಿತಿ ನೀಡಿದ್ದಾರೆ.
ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ತನ್ನ 54 ಶಾಖೆಗಳ ಮೂಲಕ ಸಣ್ಣ ಹಾಗೂ ಅತಿ ಸಣ್ಣ ವ್ಯಾಪಾರಸ್ಥರಿಗೆ ಹಾಗೂ 1500 ಕ್ಕೂ ಅಧಿಕ ಮಹಿಳಾ ಉಳಿತಾಯ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ಸಕಾಲಕ್ಕೆ ವಸೂಲಾತಿ ಮಾಡುತ್ತಿರುವುದರಿಂದ ಬ್ಯಾಂಕ್ ಇತಿಹಾಸದಲ್ಲಿಯೇ ಮೊದಲ ಬಾರಿ ದಾಖಲೆ ಲಾಭ ಗಳಿಸಲು ಸಾಧ್ಯವಾಗಿದೆ. ಹಾಗೂ ಎನ್ ಪಿಎ ಪ್ರಮಾಣ ಶೂನ್ಯವಾಗಿಸುವಲ್ಲೂ ಯಸಸ್ವಿಯಾಗಿದೆ.
ಮಾಜಿ ಸಂಸದ ಹಾಗೂ ಬ್ಯಾಂಕಿನ ಸಂಸ್ಥಾಪಕ ಕಲ್ಲಪ್ಪಣ್ಣಾ ಅವಾಡೆ, ಮತ್ತು ಮಾಜಿ ಶಾಸಕ ಪ್ರಕಾಶ ಅವಾಡೆಯವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಬ್ಯಾಂಕ್ 2862 ಕೋಟಿ ರೂ. ಠೇವು ಹೊಂದಿದ್ದು, 1846 ಕೋಟಿ ರೂ. ಸದಸ್ಯರಿಗೆ ಸಾಲ ನೀಡಿದೆ. 77 ಕೋಟಿ ರೂ.ಬಂಡವಾಳವಿದ್ದು, ಬ್ಯಾಂಕಿನ 65 ವರ್ಷಗಳ ಇತಿಹಾಸದಲ್ಲಿಯೆ ಮೊದಲನ ಬಾರಿ ದಾಖಲೆ 55 ಕೋಟಿ ರೂ. ಲಾಭ ಬಂದಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.