

ಹುಮನಾಬಾದ್: ಮೋಳಕೇರಾದ ಶ್ರೀ ಶಿವಶರಣ ಮೋಳಿಗೆ ಮಾರಯ್ಯ ದೇವಸ್ಥಾನದ ಕಲ್ಯಾಣಿ (ಸ್ನಾನ) ಕುಂಡದ ನಿರ್ಮಾಣ ಕಾಮಗಾರಿಗೆ ಭಾನುವಾರ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿ, ೧೨ನೇ ಶತಮಾನದ ಐತಿಹಾಸಿಕ ದೇವಸ್ಥಾನದಲ್ಲಿ ಕಲ್ಯಾಣಿ (ಸ್ನಾನ) ನಿರ್ಮಿಸುತ್ತಿರುವುದು ಜಲ ಸಂರಕ್ಷಣೆಗೆ ಬಹುದೊಡ್ಡ ಕೊಡುಗೆ ಆಗಲಿದೆ. ದೇವಸ್ಥಾನದ ಅಭಿವೃದ್ಧಿ ಜತೆಗೆ ಪ್ರವಾಸಿ ತಾಣವಾಗಿಸಲು ಸರ್ಕಾರದ ಗಮನಕ್ಕೆ ತಂದು ಅನುದಾನ ತರಲಾಗುವುದು. ಕಲ್ಯಾಣಿ ನಿರ್ಮಾಣಕ್ಕೆ ಸರ್ವ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಗ್ರಾಮದ ಪ್ರಮುಖರಾದ ಧನರಾಜ ಪಾಟೀಲ್, ರಾಜಕುಮಾರ ಶ್ರೀಶೈಲ, ಮಲ್ಲಿಕಾರ್ಜುನ ತಿಪ್ಪಣೋರ, ವೀರಣ್ಣ ನಾವದಗಿ, ಓಂಕಾರ ತುಂಬಾ, ಚನ್ನು ಸ್ವಾಮಿ, ವಿಜಯ ಬಿರಾದಾರ, ಸಾಯಿಕಿರಣ, ಮಲ್ಲಿಕಾರ್ಜುನ ನಾವದಗಿ, ಶಿವರಾಜ ಡಾಂಗೆ, ನಿತ್ಯಾನಂದ, ಅರವಿಂದ ಜೋಗಿರೆ ಇತರರಿದ್ದರು.