ಕಲ್ಯಾಣದಲ್ಲಿ ರಕ್ಷಾ ಬಂಧನ ಸಂಭ್ರಮ

31BK3
Published on

ಬಸವಕಲ್ಯಾಣ: ವಿಶ್ವ ಹಿಂದು ಪರಿಷತ್, ಬಜರಂಗದಳ ಸಂಘಟನೆಯಿAದ ನಗರದಲ್ಲಿ ಸಾಮೂಹಿಕ ರಕ್ಷಾ ಬಂಧನ ಕಾರ್ಯಕ್ರಮ ನಿಮಿತ್ತ ಗುರುವಾರ ಸಂಘಟನೆ ಪ್ರಮುಖರು ಮತ್ತು ಕಾರ್ಯಕರ್ತರು ವಿವಿಧೆಡೆ ಸಂಚರಿಸಿ ರಾಖಿ ಕಟ್ಟುವ ಮೂಲಕ ಸಹೋದರತ್ವದ ಸಂದೇಶ ಸಾರಲಾಯಿತು. ಸಿಪಿಐ ಕಚೇರಿಯಲ್ಲಿ ಸಿಪಿಐ ಅಲಿಸಾಬ್ ಮತ್ತು ಸಿಬ್ಬಂದಿ, ನಗರಸಭೆ ಪೌರ ಕಾರ್ಮಿಕರಿಗೆ ರಾಖಿ ಕಟ್ಟಿ ಶುಭ ಕೋರಲಾಯಿತು.

ಬಸವೇಶ್ವರ ವೃತ, ಅಂಬೇಡ್ಕರ್ ವೃತ್ತ, ಟೂರಿಸ್ಟ್ ಲಾಡ್ಜ್, ಹರಳಯ್ಯ ವೃತ್ತ, ತ್ರಿಪುರಾಂತ ಪ್ರವಾಸಿ ಮಂದಿರ (ಐಬಿ) ಹತ್ತಿರ ಬೈಕ್ ಹಾಗೂ ವಾಹನ ಸವಾರರಿಗೆ ರಾಖಿ ಕಟ್ಟುವ ಜತೆಗೆ ರಸ್ತೆ ಸುರಕ್ಷತಾ ನಿಯಮಗಳ ಕುರಿತು ತಿಳಿವಳಿಕೆ ಮೂಡಿಸಲಾಯಿತು.

ಬಜರಂಗದಳ ತಾಲೂಕು ಸಂಯೋಜಕ ರವಿ ನಾವದಗೇಕರ್, ಸಹ ಸಂಯೋಜಕ ಶ್ರೀನಿವಾಸ ಬಿರಾದಾರ, ಸಚಿನ್ ಗರುಡಕರ, ಗೋರಕ್ಷಾ ಪ್ರಮುಖ ವಿನೋದ ಬಡಿಗೇಕರ್, ಸುರಕ್ಷಾ ಪ್ರಮುಖ ಸಚಿನ್ ಸೂರ್ಯವಂಶಿ, ಶ್ರೀಧರ ಮುತ್ತೆ, ಅಜಯ ಗೌಳಿ, ಸುದರ್ಶನ ಜಾಧವ್, ನಿತೀನ್ ಸೂರ್ಯವಂಶಿ, ಸಂತೋಷಿ ಜಮಾದಾರ, ಚಾಮುಂಡೇಶ್ವರಿ ವಿಜಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net