ಕಲ್ಯಾಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ

Capture1
Published on

ಬಸವಕಲ್ಯಾಣ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ಹಾಗೂ ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ನಗರದಲ್ಲಿ ಸೋಮವಾರ ತಾಲೂಕು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘ ಹಾಗೂ ಗೊಂಡ ಸಮಾಜದಿಂದ ಬೃಹತ್ ಬೈಕ್ ರ್ಯಾಲಿ ನಡೆಯಿತು.

ರ್ಯಾಲಿಗೆ ರಥ ಮೈದಾನದ ಸಮೀಪದ ಬಿಕೆಡಿಬಿ ಕಲ್ಯಾಣ ಮಂಟಪದ ಬಳಿ ಶಾಸಕ ಶರಣು ಸಲಗರ ಚಾಲನೆ ನೀಡಿದರು. ಎಐಸಿಸಿ ಸದಸ್ಯ ಆನಂದ ದೇವಪ್ಪ, ಜಿಪಂ ಮಾಜಿ ಸದಸ್ಯ ಆನಂದ ಪಾಟೀಲ್, ತಾಪಂ ಮಾಜಿ ಅಧ್ಯಕ್ಷ ತುಕಾರಾಮ ಮಲ್ಲಪ್ಪ, ಮುಖಂಡರಾದ ಅಜರ್ುನ ಕನಕ, ಮನೋಹರ ಮೈಸೆ, ಅಮೃತ ಧಾಮಿ, ಕನರ್ಾಟಕ ಪ್ರದೇಶ ಗೊಂಡ ಕುರುಬರ ಸಂಘದ ರಾಜ್ಯ ನಿದರ್ೇಶಕ ಬಂಡೆಪ್ಪ ಮೇತ್ರೆ, ಸಮಾಜದ ಪ್ರಮುಖರಾದ ಚಂದ್ರಕಾಂತ ಮೇತ್ರೆ, ರಾಮ ಕನಕಟ್ಟೆ, ಗಹನಿನಾಥ ಮೇತ್ರೆ, ನವನಾಥ ಮಂಗಳೂರೆ, ಹುಲೆಪ್ಪ ಭುರೆ, ರಾಜೇಶ ಮೇತ್ರೆ ಸೇರಿದಂತೆ ನೂರಾರು ಯುವಕರು ರಾಯಣ್ಣ ಭಾವಚಿತ್ರದೊಂದಿಗೆ ಜೈಘೋಷ ಕೂಗಿದರು.

ತ್ರಿಪುರಾಂತ, ಶಿವಾಜಿ ಪಾಕರ್್, ಹರಳಯ್ಯ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ಚೌಕ್, ಮಹಾತ್ಮ ಬೊಮ್ಮಗೊಂಡೇಶ್ವರ ಚೌಕ್, ಕೋಟೆ, ಗಾಂಧಿ ವೃತ್ತ, ಬಸವೇಶ್ವರ ವೃತ್ತದ ವರೆಗೆ ಮುಖ್ಯರಸ್ತೆ ಮಾರ್ಗವಾಗಿ ಬೃಹತ್ ಬೈಕ್ ರ್ಯಾಲಿ ಜರುಗಿತು. ರಸ್ತೆಯುದ್ದಕ್ಕೂ ಹಲವೆಡೆ ರ್ಯಾಲಿಗೆ ಭವ್ಯ ಸ್ವಾಗತ ನೀಡಲಾಯಿತು. ನಂತರ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net