ಕಲ್ಯಾಣದಲ್ಲಿ ಅವಿರೋಧ ಆಯ್ಕೆಗೆ ಅವಕಾಶ ಕೊಡಿ

Koli Samaj
Published on

ಬೀದರ್: ಬಸವಕಲ್ಯಾಣ ಶಾಸಕ ದಿ. ಬಿ.ನಾರಾಯಣರಾವ್ ಕಂಡ ಕನಸು ನನಸಾಗಬೇಕಾದಲ್ಲಿ ಹಾಗೂ ಶೋಷಿತರ, ವಿಶ್ವಗುರು ಬಸವಣ್ಣನವರ ವಿಚಾರ ಅನುಷ್ಠಾನಗೊಳ್ಳಬೇಕಾದರೆ ಅವರ ಕುಟುಂಬದವರಿಗೆ ಪಕ್ಷಾತೀತವಾಗಿ ಅವಿರೋಧ ಆಯ್ಕೆ ಮಾಡುವ ಮೂಲಕ ವಿಧಾನಸಭೆಗೆ ಕಳಿಸಿಕೊಡಬೇಕು ಎಂದು ಕೋಲಿ ಸಮಾಜದ ಹಿರಿಯ ಮುಖಂಡ ನಾರಾಯಣರಾವ್ ಭಂಗಿ ಮನವಿ ಮಾಡಿದ್ದಾರೆ.

ಜಿಲ್ಲಾ ಟೋಕರಿ ಕೋಲಿ ಸಮಾಜ ಸಂಘ, ಜಿಲ್ಲಾ ಟೋಕರಿ ಕೋಲಿ ಸಮಾಜ ನೌಕರರ ಸಂಘ ಹಾಗೂ ಅಂಬಿಗರ ಚೌಡಯ್ಯ ಯುವ ಸೇನೆ ಸಹಯೋಗದಡಿ ಭಾನುವಾರ ಲಾಡಗೇರಿಯಲ್ಲಿರುವ ಸಮಾಜದ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಶಾಸಕ ದಿ. ಬಿ.ನಾರಾಯಣರಾವ್ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ವ ಸಮುದಾಯದ ಒಳಿತಿಗಾಗಿ ನಾರಾಯಣರಾವ್ ದುಡಿದಿದ್ದರು. ಹೀಗಾಗಿ ಅವರ ಕುಟುಂಬದ ಒಬ್ಬರಿಗೆ ಉಪ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.

ಟೋಕರಿ ಕೋಲಿ ಸಮಾಜ ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ ಮಾತನಾಡಿ, ಹೋರಾಟದಿಂದಲೇ ಗುರುತಿಸಿಕೊಂಡು ಬಡವರ, ಹಿಂದುಳಿದ ವರ್ಗಗಳ ಧ್ವನಿಯಾಗಿದ್ದ ನಾರಾಯಣರಾವ್ ಅವರನ್ನು ಕಳೆದುಕೊಂಡಿದ್ದು ಈ ಭಾಗ ಮತ್ತು ಕೋಲಿ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಕೋಲಿ ಸಮಾಜ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಣಿಕ ನೇಳಗೆ ಮಾತನಾಡಿ, ನಾರಾಯಣರಾವ್ ಕನಸು ನನಸು ಮಾಡಲು ಎಲ್ಲರೂ ಶ್ರಮಿಸಬೇಕು ಎಂದು ಕೋರಿದರು.

ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಪಾರ್ವತಿ ಸೋನಾರೆ ಮಾತನಾಡಿದರು. ಮುಖಂಡರಾದ ಪಾಂಡುರಂಗ ಗುರೂಜಿ, ಸುನೀಲ ಭಾವಿಕಟ್ಟಿ, ಮಹೇಶ ಪಾಲಂ, ಸುನೀಲ ಖಾಶೆಂಪುರ, ನಂದಕುಮಾರ ಜಮಗಿಕರ್, ಝರಣಪ್ಪ ಚಾಂಗಲೇರ, ಅಶೋಕ ಪಂಢರಗೇರಾ, ರಾಜಕುಮಾರ ಕರ್ಣೆ, ರಮೇಶ ಖಾಶೆಂಪುರ, ಶಂಕರರಾವ ಜಮಾದಾರ, ಬಸವರಾಜ ಖಾಶೆಂಪುರ, ಸಂಜುಕುಮಾರ ಅಲಿಯಂಬರ, ಧನರಾಜ ಹಂಗರಗಿ, ಸತ್ಯಪ್ರಕಾಶ ಕೋಲಿ, ಬಾಬುರಾವ ಕ್ಯಾಶೆ, ವಿಜಯಕುಮಾರ ಲಾಡಗೇರಿ, ಮಾರುತಿ ಭಾವಿಕಟ್ಟಿ, ಬಸವರಾಜ ಖಾಶೆಂಪುರ, ಮಾರುತಿ ಮಾಸ್ಟರ್, ಶರಣಪ್ಪ ಭಾವಿಕಟ್ಟಿ, ತುಕಾರಾಮ ಯಾಕತನೂರ, ಅಶೋಕ ಕಾಗೆ, ಲಕ್ಷ್ಮೀಬಾಯಿ, ವಿಜಯಕುಮಾರ ಸೋನಾರೆ, ತಿಪ್ಪಣ್ಣ ರಾಂಪುರೆ, ಬಕ್ಕಣ್ಣ ಸಂಗಮ್, ಸುಧಾಕರ ಮಾಸ್ಟರ್, ಪೃಥ್ವಿರಾಜ ಭಂಗಿ, ಈಶ್ವರ ಜಮಾದಾರ, ಧನರಾಜ ಚಿಂತಾಮಣಿ, ಹಣಮಂತ ವಿಠ್ಠಲಪುರ, ಲೋಕೇಶ ಕೋಲಿ, ಜಗದೀಶ ಕೋಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net