ಕಲ್ಯಾಣದ ಖ್ಯಾತನಾಮ‌‌ ಕಲಾವಿದರಿಗೆ ಕೆಕೆಆರ್ ಡಿಬಿ ವತಿಯಿಂದ ಗೌರವ ಸನ್ಮಾನ

IMG-20230916-WA0067
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಕಲಬುರಗಿ ‌ನಗರದ ಸೇಡಂ ರಸ್ತೆಯಲ್ಲಿ ಇರುವ ಗುಲ್ಬರ್ಗ ವಿಶ್ವವಿದ್ಯಾಲಯದ ಡಾ.ಅಂಬೇಡ್ಕರ್ ಸಭಾಂಗಣದಲ್ಲಿ ಇಂದು ಸಂಜೆ ಕಲ್ಯಾಣ ಕರ್ನಾಟಕ ಉತ್ಸವದ ಅಮೃತ ಮಹೋತ್ಸವ ಅಂಗವಾಗಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ದಲ್ಲಿ ಚಿತ್ರಕಲಾ ವಿಭಾಗದಿಂದ ಕಲಬುರಗಿಯ ಡಾ.ಜೆ.ಎಸ್ ಖಂಡೇರಾವ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ವಿಭಾಗದಿಂದ ಬೀದರ ಜಿಲ್ಲೆಯ ರಾಮುಲು ಗಾದಗಿ, ಜಾನಪದ ವಿಭಾಗದಿಂದ ಯಾದಗಿರಿ ಜಿಲ್ಲೆಯ ಲಕ್ಷ್ಮೀಬಾಯಿ ರೇಬಲ್, ತೊಗಲುಗೊಂಬೆ ವಿಭಾಗದಿಂದ ಕೊಪ್ಪಳ ಜಿಲ್ಲೆಯ ಭೀಮವ್ವ ಶಿಳ್ಳೆಕ್ಯಾತರ, ರಂಗಭೂಮಿಯಿಂದ ಬಳ್ಳಾರಿ ಜಿಲ್ಲೆಯ ರಮೇಶ್ ಗೌಡ ಪಾಟೀಲ್ ಹಾಗೂ ಜಾನಪದ ವಿಭಾಗದಿಂದ ವಿಜಯನಗರ ಜಿಲ್ಲೆಯ ಮಾತಾ ಮಂಜಮ್ಮ ಜೋಗುತಿಯವರನ್ನು ಕಲಾ ಸೇವೆ ಪರಿಗಣಿಸಿ ಸತ್ಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net