ಕಲ್ಯಾಣದ ಅಭಿವೃದ್ಧಿಗೆ ಕೆಕೆಆರ್‌ಡಿಬಿ ಸಹಕಾರಿ

klb6
Published on

ಜೇವರ್ಗಿ: ಕಲ್ಯಾಣ ಭಾಗದ ಸಮಗ್ರ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರಡಿಬಿ) ಸಹಕಾರಿಯಾಗಿದೆ ಎಂದು ಮಂಡಳಿ ಅಧ್ಯಕ್ಷರೂ ಆದ ಶಾಸಕ ಡಾ.ಅಜಯಸಿಂಗ್ ಹೇಳಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ 87 ಲಕ್ಷ ರೂ. ವೆಚ್ಚದ ಎಪಿಎಂಸಿ ಆಡಳಿತ ಕಚೇರಿ ಹಾಗೂ 33 ಲಕ್ಷ ರೂ.ಗಳ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಪಟ್ಟಣದ ಹೃದಯ ಭಾಗದಲ್ಲಿ ಎಪಿಎಂಸಿಗಾಗಿ ಸುಮಾರು 37 ಎಕರೆ ಭೂಮಿ ಮೀಸಲಿಟ್ಟಿದ್ದರು. ಇದೀಗ ಅದು ಬೃಹತ್ ಆಕಾರದಲ್ಲಿ ವಿಸ್ತಾರಗೊಂಡಿದೆ. ಅಲ್ಲದೆ ಸಾಕಷ್ಟು ರೈತರಿಗೆ ಅನುಕೂಲವಾಗಿದೆ ಎಂದರು.

ರೈತರೇ ದೇಶದ ಬೆನ್ನೆಲುಬಾಗಿದ್ದು, ಅವರ ಪ್ರಗತಿಗೆ ಹಗಲಿರುಳು ಶ್ರಮಿಸಲಾಗುವುದು. ರೈತರ ಶ್ರೆಯೋಭಿವೃದ್ಧಿಗಾಗಿ ಸರ್ಕಾರ ಚೆಕ್ ಡ್ಯಾಮ್‌ಗಳನ್ನು ನಿರ್ಮಿಸಲು ಉz್ದೆÃಶಿಸಿದ್ದು, ಇದರಿಂದ ನೀರು ಸಂಗ್ರಹ ಜತೆಗೆ ಅಂತರ್ಜಲಮಟ್ಟ ಹೆಚ್ಚಾಗಲಿದೆ. ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಮಟ್ಟ ಸುಧಾರಣೆಗೆ ಅಕ್ಷರ ಆವಿಷ್ಕಾರ್ ಯೋಜನೆ ಜಾರಿಗೆ ತಂದಿದ್ದು, ಗ್ರಾಮೀಣ ಮಕ್ಕಳಿಗೆ ಶ್ರೇಷ್ಠ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದರು.
ಎಪಿಎಂಸಿ ಕಾರ್ಯನಿರ್ವಾಹಕ ಆಭಿಯಂತರ ಎಸ್.ಎಸ್.ಜಾಗಿರದಾರ, ತಹಸೀಲ್ದಾರ್ ಮಲ್ಲಣ್ಣ ಯಲಗೋಡ, ಎಇಇ ಪಿ.ವಿ. ವಾಘಮೊರೆ, ಸಹಾಯಕ ನಿರ್ದೇಶಕಿ ಸವಿತಾ ನಾಯಕ್, ಕಾರ್ಯದರ್ಶಿ ಸುಮಂಗಲಾದೇವಿ ಮಾತನಾಡಿದರು.

ಪ್ರಮುಖರಾದ ಬಿ.ಎನ್.ಪಾಟೀಲ್, ದಾವೂದ್ ಬಢಾಘರ, ರಾಜಶೇಖರ ಸೀರಿ, ರುಕುಮ್ ಪಟೇಲ್ ಇಜೇರಿ, ಖಾಸೀಂ ಪಟೇಲ್ ಮುದಬಾಳ, ಮುನ್ನಾ ಪಟೇಲ್, ಚನ್ನಮಲ್ಲಯ್ಯ ಹಿರೇಮಠ, ಕಲ್ಯಾಣಕುಮಾರ ಸಂಗಾವಿ, ವಿಜಯಕುಮಾರ ಹಿರೇಮಠ, ಮಹಿಮೂದ್ ನೂರಿ, ಬಿ.ಎಂ.ಸುರಪುರ, ರಾಚ್ಚಣ್ಣ ಸಾಹು, ಅಣ್ಣಾರಾಯಗೌಡ ಮಿಣಜಗಿ, ಸಿದ್ದಣ್ಣ ಪೂಜಾರಿ ಹಾಲಗಡ್ಲಾ, ಸಿದ್ದುಗೌಡ ಹಳ್ಳಿ, ಸಿದ್ದುಗೌಡ ಬಿರಾಳ, ಶಿವಕುಮಾರ ಕಲ್ಲಾ, ಉಮಾಕಾಂತ ಗೋಲಗೇರಿ, ಬಸವರಾಜ ಸಾಹು ಮದ್ರಿ, ಪ್ರಕಾಶ ಫೂಲಾರಿ, ಮರೆಪ್ಪ ಸರಡಗಿ, ಜೆಟ್ಟೆಪ್ಪ ಪೂಜಾರಿ ಇತರರಿದ್ದರು.
ಗುರುಶಾಂತ ಚಿಂಚೋಳಿ ನಿರೂಪಣೆ ಮಾಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net