

ಬೀದರ್: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಬೀದರ್ ಜಿಲ್ಲಾ ಘಟಕದ ಕಟ್ಟಡ ಮತ್ತು ಇತರ ಕೂಲಿ ಕಾರ್ಮಿಕ ವಿಭಾಗಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ರವೀಂದ್ರ ಕೊಳ್ಳುರ್ (ಜಿಲ್ಲಾಧ್ಯಕ್ಷ), ರಾಮದಾಸ ಸಿಕನಪುರಕರ್, ರಮಾಕಾಂತ ಪಾಟೀಲ್ (ಉಪಾಧ್ಯಕ್ಷ), ಸಂಜುಕುಮಾರ ಶಾಬಾದ್, ಮಲ್ಲಿಕಾರ್ಜುನ ವಾಲೆ (ಸಂಘಟನಾ ಕಾರ್ಯದರ್ಶಿ), ವಿಜಯಕುಮಾರ ಚಾಮಾ, ಬಾಲಾಜಿ ಔರಾದಕರ್, ರಾಜಕುಮಾರ ಮಾಳಗೆ (ಕಾರ್ಯದರ್ಶಿ), ಅಶೋಕ ಚಂದ್ರಪ್ಪ (ಸದಸ್ಯ) ಅವರನ್ನು ನೇಮಕ ಮಾಡಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಭೀಮಾಶಂಕರ ಪಾಟೀಲ್ ಕಾಡವಾದ ತಿಳಿಸಿದ್ದಾರೆ.