ಕಲ್ಯಾಣ ಮಾದರಿ ಕ್ಷೇತ್ರವನ್ನಾಗಿಸಲು ಪ್ರಯತ್ನ

BK2
ಬಸವಕಲ್ಯಾಣದ ರಥ ಮೈದಾನದ ಸಭಾ ಭವನದಲ್ಲಿ ಗುರುವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ 78ನೇ ಸ್ವಾತಂತ್ರÈದಿನಾಚರಣೆಯಲ್ಲಿ ಶಾಸಕ ಶರಣು ಸಲಗರ ಮಾತನಾಡಿದರು. ಎಸಿ ಪ್ರಕಾಶ ಕುದರಿ. ತಹಸೀಲ್ದಾರ್ ಶಾಂತಗೌಡ ಬಿರಾದಾರ, ಪೌರಾಯುಕ್ತ ರಾಜು ಬಣಕಾರ, ಇಒ ರಮೇಶ ಸುಲ್ಪಿ, ಸಿಪಿಐ ಅಲಿಸಾಬ್, ಬಿಇಒ ಸಿದ್ದವೀರಯ್ಯ ರುದನೂರ, ಎಇಇ ಅನೀಲಕುಮಾರ ಭೈರೆ ಇದ್ದರು.
Published on

ಬಸವಕಲ್ಯಾಣ: ವಿಶ್ವಕ್ಕೆ ಪ್ರಥಮ ಬಾರಿಗೆ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ ನೆಲ. ಸಾಮಾಜಿಕ ಸಮಾನತೆಗಾಗಿ ಕ್ರಾಂತಿ ನಡೆದ ನೆಲ ಕಲ್ಯಾಣ. ಈ ಪವಿತ್ರ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯ ವಿಧಾನ ಸಭಾ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾಸಕ ಶರಣು ಸಲಗರ ಹೇಳಿದರು.

ತಾಲೂಕು ಆಡಳಿತದಿಂದ ನಗರದ ರಥ ಮೈದಾನದ ಸಭಾ ಭವನದಲ್ಲಿ ಗುರುವಾರ ಆಯೋಜಿಸಿದ್ದ 78ನೇ ಸ್ವಾತಂತ್ರÈ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಾತಂತ್ರೊÈÃತ್ಸವ ನಮಗೆ ದೊಡ್ಡ ರಾಷ್ಟಿçÃಯ ಹಬ್ಬವಾಗಿದೆ. ಸ್ವಾತಂತ್ರೊÈÃತ್ಸವ, ಗಣರಾಜ್ಯೋತ್ಸವ, ಕರ್ನಾಟಕ ರಾಜ್ಯೋತ್ಸವ, ಹೈಕ ವಿಮೋಚನಾ ದಿನಾಚರಣೆ ಸೇರಿ ಇತರೆ ಹಬ್ಬಗಳ ಕುರಿತು ವಿದ್ಯಾರ್ಥಿಗಳು ಮಹತ್ವ ತಿಳಿದುಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಮೊಬೈಲ್ ಗೀಳು ಬಿಟ್ಟು ಸಾಧನೆಗೆ ಪಣತೊಡಬೇಕು. ಉನ್ನತ ಕನಸು, ಸಾಕಾರಕ್ಕೆ ಪರಿಶ್ರಮ ಅವಶ್ಯಕ. ಶ್ರಮ ವಹಿಸಿ ಅಭ್ಯಾಸ ಮಾಡುವ ಜತೆಗೆ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಓಲಿಂಪಿಕ್ಸ್ನAತಹ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಸಾಧನೆ ಮಾಡಬೇಕು ಎಂದು ಸದಾಶಯ ವ್ಯಕ್ತಪಡಿಸಿದರು.

ಸಹಾಯಕ ಆಯುಕ್ತ ಪ್ರಕಾಶ ಕುದರಿ ಧ್ವಜಾರೋಹಣ ನೆರವೇರಿಸಿದರು. ನಗರ ಸಭೆ ಪೌರಾಯುಕ್ತ ರಾಜು ಡಿ. ಬಣಕಾರ, ತಾಪಂ ಇಒ ರಮೇಶ ಸುಲ್ಪಿ, ಸಿಪಿಐ ಅಲಿಸಾಬ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದನೂರ, ಸಣ್ಣ-ನೀರಾವರಿ ಇಲಾಖೆಯ ಎಇಇ ಅನೀಲಕುಮಾರ ಭೈರೆ ಇತರರಿದ್ದರು. ತಹಸೀಲ್ದಾರ್ ಶಾಂತಗೌಡ ಬಿರಾದಾರ ಸ್ವಾಗತಿಸಿದರು. ದೈಹಿಕ ಶಿಕ್ಷಕ ಶಿವಕುಮಾರ ಜಡಗೆ ನಿರೂಪಣೆ ಮಾಡಿದರು.

ಮೆರವಣಿಗೆಯಲ್ಲಿ ವಿವಿಧ ವೇಷಧಾರಿಗಳ ಪಾತ್ರ ಹಾಕಿದ ನಗರದ ಸರಡಗಿ ಅನ್ನಪೂರ್ಣೆಶ್ವರಿ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ನಗರ ಸಭೆಯ ಪೌರ ಕಾರ್ಮಿಕರಿಗೆ ಮತ್ತು ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಟಾಪರ್‌ಗಳಿಗೆ ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು. ವಿವಿಧ ಶಾಲಾ ವಿದ್ಯಾರ್ಥಿಗಳು ದೇಶ ಭಕ್ತಿ ಗೀತೆಗಳ ಮೇಲೆ ನಡೆಸಿಕೊಟ್ಟ ನೃತ್ಯಗಳು ಕಣ್ಮನ ಸೆಳೆದವು.

ಮೆರವಣಿಗೆ: ನಗರದ ಐತಿಹಾಸಿಕ ಕೋಟೆಯಿಂದ ಮುಖ್ಯರಸ್ತೆಯ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಸಾಗಿದ ಮೆರವಣಿಗೆ(ಪ್ರಭಾತ ಫೇರಿ) ನಡೆಯಿತು. ಕೋಟೆ, ನಗರಸಭೆ, ನೆಹರು ವೃತ್ತ, ಗಾಂಧಿ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು-ಸಿಬ್ಬಂದಿ ಮತ್ತು ವಿವಿಧ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net