ಕಲ್ಯಾಣ ಕರ್ನಾಟಕ ಕಲಾವಿದರ ಬೇಡಿಕೆ ಈಡೇರಿಸಿ: ಶಾಸಕ ಆರ್.ಬಸನಗೌಡ ತುರ್ವಿಹಾಳಗೆ ಮನವಿ

Untitled-1
ಮಸ್ಕಿಯಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಕೇಂದ್ರ ಸಮಿತಿ ಸದಸ್ಯರು ಶಾಸಕ ಆರ್.ಬಸನಗೌಡ ತುರ್ವಿಹಾಳಗೆ ಮಂಗಳವಾರ ಮನವಿ ಸಲ್ಲಿಸಿದರು. ಕಲಾವಿದರಾದ ತಿಮ್ಮಣ್ಣ ಸಾಗರಕ್ಯಾಂಪ್, ಬಸನಗೌಡ ಜಿನ್ನಾಪುರ, ಮಲ್ಲಪ್ಪ ಪೂಜಾರಿ, ಬಸಪ್ಪ ಗೌಡನಬಾವಿ, ಬಸನಗೌಡ ಆದಾಪುರ, ಹನುಮಂತಮ್ಮ, ದುರಗಮ್ಮ, ಯಂಕಮ್ಮ ಬೇಡರಕಾರ‌್ಲಕುಂಟಿ, ಜಯಮ್ಮ, ಅಮರಮ್ಮ ನಂಜಲದಿನ್ನಿ ಇದ್ದರು.
Published on

ಮಸ್ಕಿ: ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ರಂಗಭೂಮಿ, ಜನಪದ, ಸಂಗೀತ, ನೃತ್ಯ ಬಯಲಾಟ, ಬುಡಕಟ್ಟು ಕಲಾವಿದರಿದ್ದು, ಸರ್ಕಾರಿ ಸೌಲಭ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ವಂಚಿತರಾಗುತ್ತಿದ್ದಾರೆ. ಅವರನ್ನು ಗುರುತಿಸಿ ಸೌಕರ್ಯ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಕೇಂದ್ರ ಸಮಿತಿ ಸದಸ್ಯರು ಶಾಸಕ ಆರ್.ಬಸನಗೌಡ ತುರ್ವಿಹಾಳಗೆ ಮಂಗಳವಾರ ಮನವಿ ಸಲ್ಲಿಸಿದರು.


ರಾಜ್ಯದಲ್ಲಿ ಸರ್ಕಾರದ ಅಧೀನದಲ್ಲಿ ಕೆಲವು ಟ್ರಸ್ಟ್ ಹಾಗೂ ಪ್ರತಿಷ್ಠಾನ ಇರುವಂತೆ ಕಲ್ಯಾಣ ಕರ್ನಾಟಕ ಭಾಗದ ಬೀದರ್‌ನಲ್ಲಿ ಜಯದೇವಿ ತಾಯಿ ಲಿಗಾಡೆ ಹೆಸರಿನಲ್ಲಿ, ಕಲಬುರ್ಗಿಯಲ್ಲಿ ಎಂ.ಎಸ್.ಪಂಡಿತ, ಯಾದಗಿರಿಯಲ್ಲಿ ಎಂ.ಆರ್. ಬುದ್ದಿವಂತ ಶೆಟ್ಟರ್, ರಾಯಚೂರಿನಲ್ಲಿ ಪಂಡಿತ ಸಿದ್ದರಾಮ ಜಂಬಲದಿನ್ನಿ, ಕೊಪ್ಪಳದಲ್ಲಿ ಡಾ.ಸಿದ್ದಯ್ಯ ಪುರಾಣಿಕ, ಬಳ್ಳಾರಿಯಲ್ಲಿ ಡಾ.ಸುಬಧ್ರಮ ಮನಸೂರು , ವಿಜಯನಗರ ಜಿಲ್ಲೆಯಲ್ಲಿ ಎಂ.ಪಿ.ಪ್ರಕಾಶ ಹೆಸರಿನಲ್ಲಿ ಸರ್ಕಾರ ಟ್ರಸ್ಟ್ ಸ್ಥಾಪಿಸಬೇಕೆಂದು ಆಗ್ರಹಿಸಿದರು.


ಒಂದು ಸಾವಿರ ಕಲಾವಿದರಿಗೆ ಮಾಶಾಸನ ಕೊಡಲು ಸರ್ಕಾರ ಮುಂದಾಗಿದ್ದು, ಅದನ್ನು 5 ಸಾವಿರ ಕಲಾವಿದರಿಗೆ ಏರಿಕೆ ಮಾಡಬೇಕು.ಕಲ್ಯಾಣ ಕರ್ನಾಟಕದ ಕಲಾವಿದರಿಗೂ ಗುರುತಿನ ಚೀಟಿ ನೀಡಬೇಕು. ಜಿಲ್ಲಾ ಉತ್ಸವ ರೂಪಿಸಿ ಕಲಾವಿದರಿಗೆ ಅವಕಾಶ ನೀಡಬೇಕು. ಕಡಕೊಳ ಮಡಿವಾಳಪ್ಪ ಅಭಿವೃದ್ದಿ ಪ್ರಾಧಿಕಾರ ರಚಿಸಬೇಕು. ಕಲಾವಿದರ ಮಾಶಾಸನದ ವಯೋಮಾನ 58 ಇದ್ದು, 50 ಕ್ಕೆ ಇಳಿಸಬೇಕು. ಕಲಾವಿದರಿಗಾಗಿ ಪ್ರತೇಕ ವಿಧಾನ ಪರಿಷತ್ತು ಸ್ಥಾನ ಕಲ್ಪಿಸಬೇಕೆಂದು ಒತ್ತಾಯಿಸಿದರು.


ಕಲಾವಿದರಾದ ಮಲ್ಲಪ್ಪ ಪೂಜಾರಿ, ಬಸಪ್ಪ ಗೌಡನಬಾವಿ, ಬಸನಗೌಡ ಆದಾಪುರ, ಹನುಮಂತಮ್ಮ, ದುರಗಮ್ಮ, ಯಂಕಮ್ಮ ಬೇಡರಕಾರ‌್ಲಕುಂಟಿ, ಜಯಮ್ಮ, ಅಮರಮ್ಮ ನಂಜಲದಿನ್ನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net