ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಹೈಟೆಕ್ ಸ್ಪರ್ಶ

KALYANA KARNATAKA BOARD (10)
Published on


ವಾದಿರಾಜ ವ್ಯಾಸಮುದ್ರ ಕಲಬುರಗಿ
17ರಂದು ನಡೆಯಲಿರುವ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಈ ಸಲ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಕಲಬುರಗಿಯಲ್ಲಿ ಅಂದು ಜರುಗುವ ಪ್ರಧಾನ ಸಮಾರಂಭವನ್ನು ಈ ಭಾಗದ ಆರು ಜಿಲ್ಲೆಗಳ ಎಲ್ಲ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಟಿವಿ ಪರದೆ ಮೇಲೆ ನೇರ ಪ್ರಸಾರದಲ್ಲಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಹೀಗಾಗಿ ಕರೊನಾ ನಡುವೆಯೂ ಉತ್ಸವದ ನಾನಾ ಕಾರ್ಯಕ್ರಮಗಳನ್ನು ತಮ್ಮೂರಲ್ಲೇ ಕುಳಿತು ಕಣ್ತುಂಬಿಕೊಳ್ಳಬಹುದು.
17ರಂದು ವಿಶೇಷ ವಿಮಾನ ಮೂಲಕ ನಗರಕ್ಕೆ ಆಗಮಿಸುವ ಸಿಎಂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಭಾಗದ ವಿಮೋಚನೆ ರೂವಾರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ನಂತರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡುವರು. ಅವರು ವಿಮಾನದಿಂದ ಇಳಿದು ಕಾರ್ಯಕ್ರಮ ಮುಗಿಸಿ ಮರಳಿ ಹೋಗುವವರೆಗೆ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ 1400ಕ್ಕೂ ಹೆಚ್ಚು ಗ್ರಾಪಂ ಎದುರು ಅಳವಡಿಸುವ ಟಿವಿ ಪರದೆ ಮೇಲೆ ನೇರ ಪ್ರಸಾರದಲ್ಲಿ ನೋಡಬಹುದು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಐಡಿಯಾ ಮತ್ತು ಆಸಕ್ತಿ ಫಲವಾಗಿ ಈ ಯೋಜನೆ ಮೊದಲ ಬಾರಿ ಕಾರ್ಯಗತಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ತಂತ್ರಜ್ಞರ ಸಭೆ ನಡೆಸುವುದಾಗಿ ರೇವೂರ ತಿಳಿಸಿದ್ದಾರೆ. ಜಿಲ್ಲಾಡಳಿತ ಈ ಸಲ ನಡೆಸುವ ಕಾರ್ಯಕ್ರಮಕ್ಕೆ ಕೆಕೆಆರ್ಡಿಬಿ ಕೈ ಜೊಡಿಸಲಿದೆ ಎಂದು ಅವರು ಹೇಳಿದ್ದಾರೆ.
1947ರ ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರೃ ಸಿಕ್ಕರೆ, ಈ ಭಾಗ ಹೈದರಾಬಾದ್ ನಿಜಾಮಶಾಹಿಯಿಂದ 1948ರ ಸೆಪ್ಟೆಂಬರ್ 17ರಂದು ವಿಮೋಚನೆಗೊಂಡಿತು. ಹೀಗಾಗಿ ಸೆ.17 ಈ ಭಾಗದ ಜನರಿಗೆ ಸ್ವಾತಂತ್ರೋತ್ಸವದಷ್ಟೇ ಮಹತ್ವದ್ದು. ಮುಂಚೆ 17ರಂದು ಸರ್ಕಾರದಿಂದ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನವೆಂದೇ ಆಚರಿಸಲಾಗುತ್ತಿತ್ತು. ಆದರೆ ಕಳೆದ ವರ್ಷ ಬಿಜೆಪಿ ಸಕರ್ಾರ ಅಸ್ತಿತ್ವಕ್ಕೆ ಬರುತ್ತಲೇ ಈ ಭಾಗವನ್ನು ಹೈದರಾಬಾದ್ ಕನರ್ಾಟಕ ಬದಲಿಗೆ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿತು.
ಹೀಗಾಗಿ ಕಳೆದ ವರ್ಷದಿಂದ ಕಲ್ಯಾಣ ಕರ್ನಾಟಕ ಉತ್ಸವ ಮಾಡಲಾಗುತ್ತಿದೆ. ಕರೊನಾ ಹಿನ್ನೆಲೆಯಲ್ಲಿ ಉತ್ಸವ ಹೇಗೆ ನಡೆಸಬೇಕು ಎಂಬ ಬಗ್ಗೆ ಸ್ಪಷ್ಟ ಮಾರ್ಗಸೂಚಿ ಬಂದಿಲ್ಲ. ಇದರ ನಡುವೆಯೇ ಈ ಭಾಗದ ಎಲ್ಲ ಜಿಲ್ಲೆಗಳ ಗ್ರಾಪಂಗಳೆದುರು ಟಿವಿ ಪರದೆ ಮೂಲಕ ಕಾರ್ಯಕ್ರಮ ವೀಕ್ಷಣೆ ವ್ಯವಸ್ಥೆ ಮಾಡಲು ಮಂಡಳಿ ಅಧ್ಯಕ್ಷರು ಮುಂದಾಗಿರುವುದು ವಿಶೇಷ.
ಪ್ರತಿಸಲ ನಡೆಯುವ ಪ್ರಧಾನ ಕಾರ್ಯಕ್ರಮವನ್ನು ಕಲಬುರಗಿ ನಗರದ ಜನರು ಮಾತ್ರ ವೀಕ್ಷಿಸುತ್ತಿದ್ದರು. ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆ ಮತ್ತು ಕಲಬುರಗಿ ನಗರ ಹೊರತುಪಡಿಸಿದ ಜನರು ಮುಖ್ಯ ಕಾರ್ಯಕ್ರಮ ವೀಕ್ಷಣೆಯಿಂದ ವಂಚಿತವಾಗುತ್ತಿದ್ದರು. ಎಲ್ಲರೂ ಈ ಕಾರ್ಯಕ್ರಮ ವೀಕ್ಷಿಸಬೇಕು. ಉತ್ಸವಕ್ಕೆ ಇನ್ನಷ್ಟು ಅರ್ಥಪೂರ್ಣತೆ ತಂದುಕೊಡುವ ನಿಟ್ಟಿನಲ್ಲಿ ಎಲ್ಲ ಗ್ರಾಪಂ ಕಚೇರಿ ಎದುರು ಟಿವಿ ಪರದೆ ಹಾಕಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಭಾಗದ ಸುಮಾರು 2 ಲಕ್ಷ ಜನರು ಕಾರ್ಯಕ್ರಮ ವೀಕ್ಷಿಸಲು ಟಿವಿ ಪರದೆ ಹಾಕಲಾಗುತ್ತಿದೆ. ಮಂಡಳಿ ಜತೆಗೆ ಆಯಾ ಜಿಲ್ಲಾಡಳಿತಗಳು ಈ ಕೆಲಸಕ್ಕೆ ಮುಂದಾಗಿವೆ ಎಂದು ದತ್ತಾತ್ರೇಯ ಪಾಟೀಲ್ ರೇವೂರ ವಿಜಯವಾಣಿಗೆ ತಿಳಿಸಿದ್ದಾರೆ.

ಜಿಲ್ಲಾಡಳಿತಕ್ಕೆ ಮಂಡಳಿ ಸಾಥ್
ಕಲ್ಯಾಣ ಕರ್ನಾಟಕ ಉತ್ಸವವನ್ನು ಆಯಾ ಜಿಲ್ಲೆಗಳಲ್ಲಿ ಜಿಲ್ಲಾಡಳಿತಗಳೇ ನಡೆಸಿ ವಿವಿಧ ಕಾರ್ಯಕ್ರಮ ಸಂಘಟಿಸುತ್ತವೆ. ಆದರೆ ಜಿಲ್ಲಾಡಳಿತದ ಕಾರ್ಯಕ್ರಮಕ್ಕೆ ಕೈಜೋಡಿಸಲು ಕಲ್ಯಾಣ ಕನರ್ಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮುಂದಾಗಿರುವುದು ಈ ಸಲದ ವಿಶೇಷ. ಗ್ರಾಪಂಗಳೆದುರು ಟಿವಿ ಪರದೆ ಮೂಲಕ ನೇರ ಪ್ರಸಾರದಲ್ಲಿ ಮುಖ್ಯ ಕಾರ್ಯಕ್ರಮವನ್ನು ಹಳ್ಳಿಗಳಿಗೂ ಒಯ್ಯುತ್ತಿರುವ ಮಂಡಳಿ ಅಧ್ಯಕ್ಷರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಟಿವಿ ಪರದೆ ಅಳವಡಿಸುವ ಜತೆಗೆ ಕರೊನಾ ಹಿನ್ನೆಲೆಯಲ್ಲಿ ಪರಸ್ಪರ ಅಂತರ ಕಾಪಾಡಿಕೊಂಡು ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡುವ ಹೊಣೆಯನ್ನು ಆಯಾ ಗ್ರಾಪಂ ಆಡಳಿತಾಧಿಕಾರಿ ಮತ್ತು ಪಿಡಿಒಗಳಿಗೆ ವಹಿಸಲಾಗುತ್ತಿದೆ. ಈ ಕುರಿತು ಇಷ್ಟರಲ್ಲೇ ಅಧಿಕೃತ ಸುತ್ತೋಲೆ ಜಾರಿಯಾಗಲಿದೆ.

ಕಲ್ಯಾಣ ಕರ್ನಾಟಕ ಉತ್ಸವ ಈ ಭಾಗದ ಜನರಿಗೆ ಸ್ವಾತಂತೊ್ರೃತ್ಸವ ಹಬ್ಬ. ಕಲಬುರಗಿಯಲ್ಲಿ ನಡೆಯುವ ಉತ್ಸವದ ಮುಖ್ಯ ಕಾರ್ಯಕ್ರಮ ಈ ಭಾಗದ ಆರೂ ಜಿಲ್ಲೆ ಜನತೆ ನೋಡುವ ನಿಟ್ಟಿನಲ್ಲಿ ಎಲ್ಲ ಗ್ರಾಮ ಪಂಚಾಯಿತಿ ಎದುರು ದೊಡ್ಡದಾದ ಟಿವಿ ಪರದೆ ಅಳವಡಿಸಲಾಗುತ್ತಿದೆ. ಇದಕ್ಕಾಗಿ ತಾಂತ್ರಿಕ ಸಿಬ್ಬಂದಿ ಜತೆ ಚಚರ್ಿಸಲಾಗಿದೆ. ಉತ್ಸವ ಆಯಾ ಜಿಲ್ಲಾಡಳಿತಗಳಿಂದಲೇ ನಡೆಯಲಿದ್ದು, ಮಂಡಳಿ ಸಾಥ್ ನೀಡಲಿದೆ.
| ದತ್ತಾತ್ರೇಯ ಪಾಟೀಲ್ ರೇವೂರ
ಕಲ್ಯಾಣ ಕನರ್ಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net