ಕಲ್ಯಾಣ ಅಖಾಡದಲ್ಲಿ 12 ಅಭ್ಯರ್ಥಿ

election
Published on

ಬಸವಕಲ್ಯಾಣ: ಕ್ಷೇತ್ರದ ಉಪ ಚುನಾವಣೆ ನಾಮಪತ್ರ ವಾಪಸ್ ಪಡೆಯುವ ಕಡೇ ದಿನವಾದ ಶನಿವಾರ ಇಬ್ಬರು ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದಾರೆ.

ಎನ್.ಸಿ.ಪಿ ಅಭ್ಯರ್ಥಿ ಎಂ.ಜಿ. ಮುಳೆ ಹಾಗೂ ಪಕ್ಷೇತರ ಅಭ್ಯರ್ಥಿ ಈರಣ್ಣಾ ಹಡಪದ ಸಣ್ಣೂರ ನಾಮಪತ್ರ ವಾಪಸ್ ಪಡೆದಿದ್ದು, ಕಣದಲ್ಲಿ ಅಂತಿಮವಾಗಿ 12 ಅಭ್ಯರ್ಥಿಗಳು ಉಳಿದಿದ್ದಾರೆ. ಶರಣು ಸಲಗರ್(ಬಿಜೆಪಿ), ಮಲ್ಲಮ್ಮ (ಮಾಲಾ) ಬಿ.ನಾರಾಯಣರಾವ್ (ಕಾಂಗ್ರೆಸ್), ಸೈಯದ್ ಯಸ್ರಬ್ ಅಲಿ ಖಾದ್ರಿ (ಜೆಡಿಎಸ್), ಪಕ್ಷೇತರ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖೂಬಾ, ಅಬ್ದುಲ್ ರಜಾಕ್, ಅಂಕುಶ, ಫರಜಾನಾ ಬೇಗಂ, ಮಂಜುನಾಥ ಶ್ರೀಂಗೇರಿ, ವೆಂಕಟೇಶ್ವರ ಮಹಾಸ್ವಾಮೀಜಿ, ಅಲ್ತಾಫ್, ಅಂಬ್ರೋಸ್ ಡಿ ಮೆಲ್ಲೋ, ರವಿಕಿರಣ ಕಣದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net