ಕಲ್ಪಿತ ವಿಧಾನಸಭೆ ಅಧಿವೇಶನ ಪ್ರದರ್ಶನ

Imaginary assembly session performance
ಇಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಕಲ್ಪಿತ ವಿಧಾನಸಭೆ ಅಧಿವೇಶನ ಪ್ರದರ್ಶನ ಜರುಗಿತು.
Published on

ಇಂಡಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಕಲ್ಪಿತ ವಿಧಾನಸಭೆ ಅಧಿವೇಶನ ಪ್ರದರ್ಶನ ಜರುಗಿತು.
ಕಲ್ಪಿತ ವಿಧಾನಸಭೆ ಅಧಿವೇಶನವನ್ನು ಎಲ್ಲರ ಮನಸ್ಸು ಗೆಲ್ಲುವಂತೆ ವಿದ್ಯಾರ್ಥಿಗಳು ನೈಜವಾಗಿ ಕಟ್ಟಿಕೊಟ್ಟರು. ರಾಜ್ಯಶಾಸ್ತ್ರ ಪ್ರಾಧ್ಯಾಪಕಿ ಸುರೇಖಾ ವಾರದ, ಶಶಿಕಾಂತ ಹಾವಳಗಿ ಮಾರ್ಗದರ್ಶನದಲ್ಲಿ ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳು ಕಲ್ಪಿತ ವಿಧಾನಸಭೆ ಅಧಿವೇಶನ ನಡೆಸಿದರು.

ಸವಿತಾ ಪೂಜಾರಿ ರಾಜ್ಯಪಾಲರ ಹುದ್ದೆ, ಅರುಣಕುಮಾರ ಬಡಿಗೇರ ಸಭಾಪತಿ ಹುದ್ದೆ, ತುಕರಾಮ ಹೊನಕೋರೆ ಮುಖ್ಯಮಂತ್ರಿಗಳ ಹುದ್ದೆ, ಬಸವರಾಜ ಕಲಶೆಟ್ಟಿ ಗೃಹ ಸಚಿವ ಹುದ್ದೆ, ಆಕಾಶ ಹಡಪದ ಕಂದಾಯ ಸಚಿವ, ಸುರೇಶ ತಳಕೇರಿ ವಿರೋಧ ಪಕ್ಷದ ನಾಯಕ, ಸಚಿನ ಬಡಿಗೇರ ಸೇರಿ ಅನೇಕ ವಿದ್ಯಾರ್ಥಿಗಳು ಸಚಿವರ, ಶಾಸಕರ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ತುಕಾರಾಮನು ಹೊನಕೋರೆ ಬಜೆಟ್ ಮಂಡನೆ ಮಾಡುವುದು, ವಿರೋಧ ಪಕ್ಷದ ನಾಯಕ ಪ್ರಶ್ನೆ ಕೇಳುವಂಥದ್ದು, ವಿರೋಧ ಪಕ್ಷದ ಶಾಸಕರು ಆಡಳಿತ ಪಕ್ಷದ ಮುಖಂಡರಿಗೆ ಪ್ರಶ್ನೆ ಕೇಳುವ ಸನ್ನಿವೇಶಗಳನ್ನು ತುಂಬಾ ಅಚ್ಚುಕಟ್ಟಾಗಿ ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಪ್ರಾಚಾರ್ಯ ರಮೇಶ ಆರ್.ಎಚ್., ಮಾತನಾಡಿ, ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನದ ಪ್ರಾಮುಖ್ಯತೆ ಅರ್ಥೈಸಿಕೊಳ್ಳುವುದು ಬಹಳ ಉತ್ತಮವಾದದ್ದು, ವಿದ್ಯಾರ್ಥಿಗಳಲ್ಲಿನ ಸೂಕ್ತ ಪ್ರತಿಭೆಯನ್ನು ಗುರುತಿಸುವ ಹೊರತೆಗೆಯುವ ಕೆಲಸ ಪ್ರಾಧ್ಯಾಪಕರದ್ದಾಗಿರುತ್ತದೆ. ಕಾರಣ ಕಾಲೇಜಿನಲ್ಲಿ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ. ಇಂದಿನ ವಿದ್ಯಾರ್ಥಿಗಳು ನಾಳೆ ದೇಶದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದರು.

ಪ್ರಾಧ್ಯಾಪಕರಾದ ಕಿರಣಕುಮಾರ ರೇವಣಕರ್, ಪುಷ್ಪಲತಾ ಆರ್, ಶಿರಿನ್ ಸುಲ್ತಾನ, ಇನಾಮದಾರ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net