ಕಲ್ಪಿತ ತಿಥಿ ಆಚರಣೆ ಮಾಡಿದ ಕರವೇ ಕಾರ್ಯಕರ್ತರು

IMG-20230929-WA0030.jpg
Published on

ದಾವಣಗೆರೆ: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಶುಕ್ರವಾರ, ಕರ್ನಾಟಕ ರಕ್ಷಣಾ ವೇದಿಕೆ (ಟಿ.ನಾರಾಯಣಗೌಡ ಬಣ) ಜಿಲ್ಲಾ ಘಟಕದ ಕಾರ್ಯಕರ್ತರು ಗುರುಭವನ ಸಮೀಪ ಪ್ರದಾನಿ ನರೇಂದ್ರ ಮೋದಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಸ್ಟಾಲಿನ್ ಅವರ ಭಾವಚಿತ್ರ ಇರಿಸಿ ಕಲ್ಪಿತ ತಿಥಿ ಆಚರಣೆ ಮಾಡಿದರು. ಪ್ರತಿಕೃತಿ ದಹನ ಮಾಡುವುದನ್ನು ಪೊಲೀಸರು ತಡೆದರು.

ಬೆಂಗಳೂರು, ಮೈಸೂರು, ಮಂಡ್ಯ ರೈತರಿಗೆ ಬೆಳೆಗಳಿಗೆ ನೀರಿಲ್ಲದಿರುವಾಗ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಿದ್ದು ಸರಿಯಲ್ಲ. ಇದು ಸಿದ್ದರಾಮಯ್ಯ ಸರ್ಕಾರದ ಆರನೇ ಗ್ಯಾರಂಟಿಯಾಗಿದೆ ಎಂದು ಸಂಘಟನೆ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಲೇವಡಿ ಮಾಡಿದರು.

ಕಾವೇರಿ ನಿರ್ವಹಣಾ ಪ್ರಾಧಿಕಾರ ಎದುರು ಬಿಜೆಪಿ ಪ್ರತಿಭಟನೆ ಮಾಡಬೇಕು. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕು. ಇಲ್ಲವಾದಲ್ಲಿ ಅ.10ರಂದು ಟಿ.ನಾರಾಯಣಗೌಡರ ನಿರ್ಧರಿಸಿದಂತೆ ದೆಹಲಿ ಚಲೋ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ಬಸಮ್ಮ, ಮಂಜುಳಮ್ಮ, ಗೋಪಾಲ್ ದೇವರಮನಿ, ಜಿ.ಎಸ್. ಸಂತೋಷ್, ಬಾಷಾ ಖಾದರ್, ತನ್ವೀರ್, ಗಿರೀಶ್‌ಕುಮಾರ್, ರವಿಕುಮಾರ್. ಎನ್.ಬಿ.ಲೋಕೇಶ್ ಇತರರಿದ್ದರು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net