ಕಲೆಗೆ ಕಲಾವಿದರ ಕೊಡುಗೆ ಅಪಾರ, ಪ್ರಾಂಶುಪಾಲೆ ಸಿ. ಚಂದ್ರಕಲಾ ಅಭಿಮತ, ಜನಪದ ಕಾರ್ಯಾಗಾರಕ್ಕೆ ಚಾಲನೆ

24 Nela JPEG
Published on

ನೆಲಮಂಗಲ: ಜಾನಪದ ಕಲೆ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆಯಲು ಕಲಾವಿದರ ಕೊಡುಗೆ ಅವಿಸ್ಮರಣೀಯ ಎಂದು ಪ್ರಾಂಶುಪಾಲೆ ಸಿ.ಚಂದ್ರಕಲಾ ಹೇಳಿದರು.

ನಗರದ ಪ್ರಿಯದರ್ಶಿನಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಸಿಂಚನಾ ಕಲಾ ಕೇಂದ್ರ ಟ್ರಸ್ಟ್ ಆಯೋಜಿಸಿದ್ದ ಜಾನಪದ ಗಾಯನ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಅಧುನಿಕ ಯುಗದಲ್ಲಿ ಜಾನಪದ ಕಲೆ ಕಣ್ಮರೆಯಾಗುತ್ತಿವೆ. ಬಹುತೇಕರು ಸಾಮಾಜಿಕ ಜಾಲತಾಣಗಳಿಗೆ ಮಾರುಹೋಗಿದ್ದು, ಕಲೆ, ಸಾಹಿತ್ಯವನ್ನು ಮರೆಯುತ್ತಿರುವುದು ಬೇಸರ ಸಂಗತಿ. ಪ್ರತಿಯೊಬ್ಬರೂ ಕಲಾವಿದರೊಂದಿಗೆ ಶ್ರಮಿಸಿದಾಗ ಮಾತ್ರ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿಸಲು ಸಾಧ್ಯ ಎಂದರು.

ಗ್ರಾಪಂ ಮಾಜಿ ಸದಸ್ಯೆ ನಾಗರತ್ನಮ್ಮ ಮಾತನಾಡಿ, ಹಳ್ಳಿಯಲ್ಲಿ ಹುಟ್ಟಿದ್ದ ಒಬ್ಬ ಕಲಾವಿದ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲು ಜಾನಪದ ಕಲೆ ಸಹಕಾರಿಯಾಗಿದೆ. ಪ್ರತಿಯೊಬ್ಬರೂ ಶ್ರಮವಹಿಸಿ ಅಭ್ಯಾಸ ಮಾಡಿದರೆ ಸಾಧನೆಯ ಹಾದಿ ಸುಗಮವಾಗುತ್ತದೆ. ರಾಷ್ಟ್ರಮಟ್ಟದಲ್ಲಿ ಹಲವು ಜಾನಪದ ಕಾರ್ಯಕ್ರಮ ನೀಡಿದ ಸಿ.ಎಚ್.ಸಿದ್ದಯ್ಯ ಅವರು ತರಬೇತಿ ಕಾರ್ಯಾಗಾರ ನಡೆಸುತ್ತಿದ್ದು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಇಂದಿನ ಯುವ ಸಮುದಾಯ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ತೊಡಗಿಸಿಕೊಂಡು ಜಾನಪದ ಕಲೆಗಳನ್ನು ಅಭ್ಯಾಸ ಮಾಡಿ ದೇಶ ವಿದೇಶದಲ್ಲಿ ಪ್ರದರ್ಶನ ನೀಡಿ ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಂತಹ ಮಹನೀಯರ ಪಟ್ಟಿಗೆ ಇಂದಿನ ಯುವಜನರ ಹೆಸರು ಬರುವಂತಾಗಬೇಕು ಎಂದು ಟ್ರಸ್ಟ್ ಅಧ್ಯಕ್ಷ ಸಿ.ಎಚ್.ಸಿದ್ದಯ್ಯ ತಿಳಿಸಿದರು.

ಗ್ರಾಪಂ ಮಾಜಿ ಸದಸ್ಯೆ ಹನುಮಂತಮ್ಮ, ಕಾಲೇಜು ಆಡಳಿತ ಮಂಡಳಿ ಸದಸ್ಯ ಧರ್ಷಿಣಿ, ಎನ್‌ಎಸ್‌ಎಸ್ ಅಧಿಕಾರಿ ರುದ್ರಪ್ಪ, ಉಪನ್ಯಾಸಕ ಬೋರಯ್ಯ, ಶ್ರೀನಿವಾಸ್, ಕಲಾವಿದೆ ಯಶೋದಾ ಹಾಸನ್, ಸರಸ್ವತಿ, ಪವನ್ ಕುಮಾರ್‌ನಾಯ್ಕ, ಗಂಗರಾಜು, ನವೀನ್, ಚೇತನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net