ಕಲೆಗಳ ಪೋಷಣೆಗೆ ಸರ್ಕಾರ ಯೋಜನೆ ರೂಪಿಸಲಿ

02 KAMPLI 02
Published on

ಕಂಪ್ಲಿ: ಕರಕುಶಲ ಕಲೆಗಾರ ಪರಶುರಾಮಪ್ಪ ಚಿತ್ರಗಾರ ಅವರ ಕಲೆಯನ್ನು ಪೋಷಿಸಿ ಉಳಿಸಲು ಸರ್ಕಾರ ಮುಂದಾಗಬೇಕಿದೆ ಎಂದು ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಹೇಳಿದರು.

ಪಟ್ಟಣದಲ್ಲಿ ಪರಶುರಾಮಪ್ಪ ಚಿತ್ರಗಾರ ವಿಜಯನಗರ ಜನಪದ ಕರಕುಶಲ ಕಲೆಗಳ ಟ್ರಸ್ಟ್ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದ ಸಾನ್ನಿಧ್ಯವಹಿಸಿ ಸೋಮವಾರ ಮಾತನಾಡಿದರು. ಪಾರಂಪರಿಕ ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸರ್ಕಾರ ಯೋಜನೆಗಳನ್ನು ರೂಪಿಸಬೇಕಿದೆ ಎಂದು ಸಲಹೆ ನೀಡಿದರು.

ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ, ಅಖಂಡ ಬಳ್ಳಾರಿ ಜಿಲ್ಲೆಯ ಭಾಗವಾಗಿ ಡಿಸೆಂಬರ್‌ನಲ್ಲಿ 88ನೇ ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುವುದು. ಆಡಳಿತಾತ್ಮಕವಾಗಿ ಜಿಲ್ಲೆ ವಿಭಜನೆಗೊಂಡಿದ್ದರೂ ಸಾಹಿತ್ಯ, ಸಾಂಸ್ಕೃತಿಕವಾಗಿ ಅಖಂಡವಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕಿನ್ನಾಳ ಕರಕುಶಲ ಕಲೆಯನ್ನು ಪೋಷಿಸುವಲ್ಲಿ ಚಿತ್ರಗಾರ ಪರಶುರಾಮಪ್ಪ ಅವರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.

ಕನ್ನಡ ವಿವಿಯ ಪ್ರಾಧ್ಯಾಪಕ ಡಾ.ಚಲುವರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಶುರಾಮಪ್ಪ ಚಿತ್ರಗಾರ ಅವರ ವಿಜಯನಗರ ಜನಪದ ಹಿನ್ನೆಲೆಯ ಕರಕುಶಲ ಕಲೆ ಕುರಿತು ನಾಲ್ಕು ವಿವಿಗಳ ವಿದ್ಯಾರ್ಥಿಗಳು ಅಧ್ಯಯನ ನಡೆಸಿದ್ದಾರೆ. ಪರಶುರಾಮಪ್ಪ ಅವರ ಕಲಾ ಮಾದರಿಗಳ ಪ್ರದರ್ಶನ, ಉನ್ನತ ಮಟ್ಟದ ಅಧ್ಯಯನ ಮತ್ತು ಪೋಷಣೆಯ ಅಗತ್ಯವಿದೆ ಎಂದರು.

ಬೆಂಗಳೂರಿನ ಶಿಲ್ಪ ಕಲಾವಿದ ಕೆ.ಶ್ರೀಧರಮೂರ್ತಿ ಅವರ ಜೀವಮಾನ ಶ್ರೇಷ್ಠ ಶಿಲ್ಪಕಲೆ ಗುರುತಿಸಿ ಪರಶುರಾಮಪ್ಪ ಚಿತ್ರಗಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಮುಖರಾದ ಸುಮಿತ್ರಮ್ಮ ಪರಶುರಾಮಪ್ಪ ಚಿತ್ರಗಾರ, ಗುಳೇದಗುಡ್ಡ ನಾರಾಯಣಪ್ಪ ಚಿತ್ರಗಾರ, ಪಿ.ಮೂಕಯ್ಯಸ್ವಾಮಿ, ವೆಂಕಟಸುಬ್ಬರಾಜು, ಷಣ್ಮುಖಪ್ಪ ಚಿತ್ರಗಾರ, ಬಿ.ನಾರಾಯಣಪ್ಪ, ಕಂಬಾಳಿಮಠ, ರಾಜಶೇಖರ, ರಾಮಕೃಷ್ಣಪ್ಪ, ರಮೇಶ, ರಾಮಚಂದ್ರ, ರವಿ, ರಾಜಾರಾಮ್, ಸುದರ್ಶನ, ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net