ಕಲೆ ಬೆಳವಣಿಗೆಗೆ ರಂಗಾಯಣ ಪೂರಕ ಕೆಲಸ

17
Published on

ಮೈಸೂರು: ಕಲೆ, ಸಾಹಿತ್ಯ, ಸಂಗೀತ, ನೃತ್ಯ ಬೆಳವಣಿಗೆಗೆ ಪೂರಕವಾಗಿ ರಂಗಾಯಣ ಕೆಲಸ ಮಾಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್.ತಂಗಡಗಿ ಮೆಚ್ಚುಗೆ ವ್ಯಕ್ತಪಡಿಸಿದರು.


ನಗರದ ರಂಗಾಯಣ ಭೂಮಿಗೀತ ರಂಗವೇದಿಕೆಯಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಬಿ.ವಿ.ಕಾರಂತ ಕಾಲೇಜು ರಂಗ ತರಬೇತಿ ಶಿಬಿರ ಹಾಗೂ ಸುಬ್ಬಯ್ಯನಾಯ್ಡು, ಪದ್ಮಶ್ರೀ ನಾಗರತ್ನಮ್ಮ ಹವ್ಯಾಸಿ ರಂಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ಇತರ ಕಲೆಗಳ ಬೆಳವಣಿಗೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದೊಡ್ಡ ಕಾಣಿಕೆ ಇದೆ. ಇದರಲ್ಲಿ ಮೈಸೂರು ರಂಗಾಯಣದ ಕೊಡುಗೆ ಸಹ ಇದೆ ಎಂದರು.


ರಂಗಾಯಣ ನಿರ್ದೇಶಕರ ನೇಮಕಾತಿ ಕುರಿತು ಸಾಕಷ್ಟು ಒತ್ತಡವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.


ಮೈಸೂರು ದಸರಾ ಮಹೋತ್ಸವದ ಕುರಿತು ಹೆಚ್ಚಿನ ಮಾಹಿತಿ ಪಡೆಯಬೇಕಾಗಿರುವುದರಿಂದ ಅಧಿಕಾರಿಗಳ ಸಭೆ ಸದ್ಯದಲ್ಲೇ ನಡೆಸಲಾಗುವುದು ಎಂದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶ್ವನಾಥ ಪಿ.ಹಿರೇಮಠ, ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಉಪನಿರ್ದೇಶಕಿ ನಿರ್ಮಲಾ ಮಠಪತಿ, ಹಿರಿಯ ರಂಗಕರ್ಮಿ ವೆಂಕಟರಮಣ ಐತಾಳ, ಶಿಬಿರದ ಸಂಚಾಲಕ ಅರಸೀಕೆರೆ ಯೋಗಾನಂದ, ಹಿರಿಯ ಕಲಾವಿದೆ ಸೌಮ್ಯ ಪಾಣಾಜೆ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net