ಕಲೆ, ಕ್ರೀಡೆ, ಶಿಕ್ಷಣ ಬದುಕಿಗೆ ದಾರಿದೀಪ

Sports
Published on

ಚಿತ್ರದುರ್ಗ: ಕಲೆ, ಕ್ರೀಡೆ, ಶಿಕ್ಷಣ ಬದುಕಿಗೆ ದಾರಿದೀಪವಾಗಿದ್ದು, ವಿದ್ಯಾರ್ಥಿಗಳು ಆಸಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ಮುರುಘಾಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಸಲಹೆ ನೀಡಿದರು.

ಎಂಐಟಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಎಸ್‌ಜೆಎಂ ಪಾಲಿಟೆಕ್ನಿಕ್ (ಅನುದಾನಿತ) ಕಾಲೇಜಿನ 2023-24ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಠ್ಯ-ಪಠ್ಯೇತರ ಚಟುವಟಿಕೆ ಎರಡರಲ್ಲೂ ವಿದ್ಯಾರ್ಥಿಗಳು ಯಶಸ್ಸು ಗಳಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಬೌದ್ಧಿಕ ಮತ್ತು ಭೌತಿಕ ಸಮತೋಲನ ಕಾಯ್ದುಕೊಂಡು ಆರೋಗ್ಯ ರಕ್ಷಣೆಗೆ ವಿಶೇಷ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಎಸ್.ವಿ.ರವಿಶಂಕರ್, ವಿಭಾಗಗಳ ಮುಖ್ಯಸ್ಥರಾದ ಮಮ್ತಾಜ್ ಬೇಗಂ, ಚನ್ನಕೇಶವ, ರಘು, ನಳಿನಾಕ್ಷಿ, ಮೋಹನ್, ಉಪನ್ಯಾಸಕರಾದ ಅನಂತನಾರಾಯಣ, ಗೋವಿಂದರಾಜು, ಪ್ರಶಾಂತ್, ಧರ್ಮೇಂದ್ರ, ತೀರ್ಪುಗಾರ ಅರುಣ್, ದೈಹಿಕ ನಿರ್ದೇಶಕ ಕುಮಾರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net