ಕಲೆ ಉಳಿಸುವ ಜವಾಬ್ದಾರಿ ಪ್ರೇಕ್ಷಕರ ಮೇಲಿದೆ - ನಯೋಪ್ರಾ ಅಧ್ಯಕ್ಷ ಸೈಯ್ಯದ್ ಇಲಿಯಾಸ್ ಖಾದ್ರಿ ಹೇಳಿಕೆ

gvt 01
ಗಂಗಾವತಿ ಭಗೀರಥ ವೃತ್ತದಲ್ಲಿ ಶ್ರೀ ಅಂಜನಾದ್ರಿ ಗೆಜ್ಜೆ ಹೆಜ್ಜೆ ಜನ ಸೇವಾ ಕಲಾ ಟ್ರಸ್ಟ್ ನಿಂದ ಹಮ್ಮಿಕೊಂಡಿದ್ದ ರಕ್ತರಾತ್ರಿ ಪೌರಾಣಿಕ ನಾಟಕ ಪ್ರದರ್ಶನಕ್ಕೆ ನಯೋಪ್ರಾ ಅಧ್ಯಕ್ಷ ಸೈಯ್ಯದ್ ಇಲಿಯಾಸ್ ಖಾದ್ರಿ ಶನಿವಾರ ಚಾಲನೆ ನೀಡಿದರು. ನಗರಸಭೆ ಸದಸ್ಯ ಶಾಮೀದ್ ಮನಿಯಾರ್, ಟ್ರಸ್ಟ್ ಅಧ್ಯಕ್ಷ ನಾಗರಾಜ್ ಇಂಗಳಗಿ ಇತರರಿದ್ದರು.
Published on

ಗಂಗಾವತಿ: ದೈಹಿಕ ಮತ್ತು ಮಾನಸಿಕ ಸದೃಢತೆ ಒದಗಿಸುವ ರಂಗಭೂಮಿ ಕಲೆ ಉಳಿಸುವ ಜವಾಬ್ದಾರಿ ಪ್ರೇಕ್ಷಕರ ಮೇಲಿದೆ ಎಂದು ನಯೋಪ್ರಾ ಅಧ್ಯಕ್ಷ ಸೈಯ್ಯದ್ ಇಲಿಯಾಸ್ ಖಾದ್ರಿ ಹೇಳಿದರು.

ನಗರದ ಭಗೀರಥ ವೃತ್ತದಲ್ಲಿ ಶ್ರೀ ಅಂಜನಾದ್ರಿ ಗೆಜ್ಜೆ ಹೆಜ್ಜೆ ಜನ ಸೇವಾ ಕಲಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ರಕ್ತರಾತ್ರಿ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಸಿನಿಮಾ ಕ್ಷೇತ್ರದಲ್ಲಿ ಎಲ್ಲವೂ ರಿಯಲ್ ಅಲ್ಲ. ಅದು ರೀಲ್‌ಗಳ ಮೇಲೆ ಅವಲಂಬಿತವಾಗಿದೆ. ರಂಗಭೂಮಿ ಕ್ಷೇತ್ರ ಕಲಾವಿದರ ಸಾಮರ್ಥ್ಯಪಡಿಸುವ ಪ್ರಮುಖ ವೇದಿಕೆ. ಇತ್ತೀಚಿನ ದಿನಗಳಲ್ಲಿ ರಂಗಭೂಮಿ ಪ್ರಯೋಗ ಕಡಿಮೆಯಾಗುತ್ತಿದ್ದು, ಕಲೆ ಮತ್ತು ಕಲಾವಿದರನ್ನು ಉಳಿಸಬೇಕಿದೆ ಎಂದರು.

ನಗರಸಭೆ ಸದಸ್ಯ ಶಾಮೀದ್ ಮನಿಯಾರ್ ಮಾತನಾಡಿ, ಕಲಾಮಂದಿರ ಮತ್ತು ವೇದಿಕೆ ಕೊರತೆಯಿಂದ ರಂಗಭೂಮಿ ಕಲೆ ನೇಪಥ್ಯಕ್ಕೆ ಸರಿಯುತ್ತಿದ್ದು, ಕಲಾವಿದರಿಗೂ ತೊಂದರೆಯಾಗಿದೆ. ನಾಟಕ ಪ್ರದರ್ಶನ ಆಯೋಜಿಸುವುದು ಸಾಮಾನ್ಯದ ಕೆಲಸವಲ್ಲ ಎಂದರು.

ಟ್ರಸ್ಟ್ ಅಧ್ಯಕ್ಷ ನಾಗರಾಜ ಇಂಗಳಗಿ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಚಂದ್ರಶೇಖರ್ ಮುಕ್ಕುಂದಿ, ಪಿಎಸ್ಸೆಸ್ಸೆನ್ ಉಪಾಧ್ಯಕ್ಷ ಶರಣಪ್ಪ ಕಟ್ಟಿಮನಿ ಸೇರಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಆಶ್ರಯ ಸಮಿತಿ ಸದಸ್ಯ ಆಸ್ೀ ಶಾನಬಾಗ್, ವಿವಿಧ ಸಂಘಟನೆ ಪದಾಧಿಕಾರಿಗಳಾದ ರೇವಣಸಿದ್ದಯ್ಯಸ್ವಾಮಿ, ಹನುಮಂತಪ್ಪ ಡಗ್ಗಿ, ಗೋವಿಂದಪ್ಪ ಹುಲಿಗಿ, ರಂಗಪ್ಪ, ಬಸವರಾಜ್ ಕರಡಕಲ್, ಉಮಾ ರಮೇಶ್ ಇಂಗಳಗಿ, ರಮೇಶ ಕಾಳಿ, ಶಿವಣ್ಣ, ಚನ್ನಪ್ಪ ಕುರಗೋಡು ಇತರರಿದ್ದರು. ಸ್ಥಳೀಯ ಮತ್ತು ಬಳ್ಳಾರಿ ಜಿಲ್ಲೆಯ ಹವ್ಯಾಸಿ ಕಲಾವಿದರು ಅಭಿನಯಿಸಿದ ರಕ್ತ ರಾತ್ರಿ ನಾಟಕ ಗಮನಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net