ಕಲುಷಿತ ನೀರು ಸೇವನೆ,ಮಹಿಳೆ ಸಾವು,ಹಲವರು ಅಸ್ವಸ್ಥ

IMG-20230801-WA0047--02
Published on

ಚಿತ್ರದುರ್ಗ:ನಗರದ ಹೊರ ವಲಯ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ 23 ವರ್ಷದ ಮಹಿಳೆಯೊಬ್ಬರು ಅಸು ನೀಗಿದ್ದು 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ.

ಅಸ್ವಸ್ಥರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಪರಿಸ್ಥಿತಿ ಗಂಭೀರವಾಗಿರುವಂಥ ಕೆಲವರನ್ನು ಬಸವೇಶ್ವರ ಆಸ್ಪತ್ರೆಗೆ ಸ್ಥಳಾಂತರಿ ಸಲಾಗಿದೆ. ಇನ್ನು ಕೆಲವರು ಖಾಸಗಿ ನರ್ಸಿಂಗ್ ಹೋಂನಲ್ಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. 40ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆಂದು ಹೇಳಲಾಗಿದೆ.
ಘಟನೆಗೆ ಕಲುಷಿತ ನೀರು ಅಥವಾ ಆಹಾರ ಸೇವನೆ ಕಾರಣವೇ ಎಂಬುದು ಪರೀಕ್ಷೆಯಿಂದ ತಿಳಿಯಬೇಕಿದೆ. ಪೈಪ್‌ಲೈನ್ ಒಡೆದು ನೀರು ಕಲುಷಿತಗೊಂಡಿದೆ ಎಂದು ಹೇಳಲಾಗಿದ್ದು,ಸ್ಥಳಕ್ಕೆ ಮೊಬೈಲ್‌ಕ್ಲಿನಿಕ್‌ನೊಂದಿಗೆ ವೈದ್ಯರ ತಂಡ ದೌಡಾಯಿಸಿದ್ದಾರೆ.

ಜಿಲ್ಲಾಸ್ಪತ್ರೆಗೆ 20 ಜನರು ದಾಖಲಾಗಿದ್ದು,ಮಹಿಳೆಯೊಬ್ಬರು ಅಸು ನೀಗಿದ್ದು, 20 ಜನರು ದಾಖಲಾಗಿದ್ದಾರೆ ಎಂದು ಜಿಲ್ಲಾ ಸರ್ಜನ್ ಡಾ.ಎಚ್.ಜೆ.ಬಸವರಾಜಪ್ಪ ತಿಳಿಸಿದ್ದಾರೆ.

ಪ್ರಾಥಮಿಕ ವರದಿ ಪ್ರಕಾರ ಕಲುಷಿತ ನೀರು ಸೇವನೆಯಿಂದ ಅನೇಕರು ವಾಂತಿಬೇಧಿಯಿಂದ ಅಸ್ವಸ್ಥಗೊಂಡಿದ್ದು ಚಿಕಿತ್ಸೆ ನೀಡಕಲಾಗುತ್ತಿದೆ. ಸ್ಥಳದಲ್ಲೂ ಅಗತ್ಯ ಔಷಧಗಳೊಂದಿಗೆ ವೈದ್ಯರು ಧಾವಿಸಿದ್ದಾರೆ. ಪರ್ಯಾಯ ನೀರು ಪೂರೈಕೆಗೆ ಸೂಚಿಸಲಾಗಿದೆ ಎಂದು ಡಿಸಿ ಜಿಆರ್‌ಜೆ ದಿವ್ಯಾಪ್ರಭು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net