

ಚಿತ್ರದುರ್ಗ: ಕಲುಷಿತ ನೀರು ಸೇವನೆಯಂತಹ ಯಾವುದೇ ಅಹಿತಕರ ಘಟನೆಗಳಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು. ಜಿಪಂದಲ್ಲಿ ಶುಕ್ರವಾರ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,ಜನವಸತಿ ಪ್ರದೇಶಗಳಲ್ಲಿರುವ ನೀರು ಪೂರೈಕೆ ಪೈಪ್ಲೈನ್ಗಳ ಮೇ ಲೆ ನಿತ್ಯವೂ ಕಣ್ಗಾವಲು ಇರಲಿ. ಯಾವುದಾದರೂ ಪೈಪ್ಲೈನ್ ಹಾಳಾಗಿದ್ದರೆ ಕೂಡಲೇ ದುರಸ್ತಿ ನಡೆಸಿ ಕಲುಷಿತ ನೀರು, ಕುಡಿಯುವ ನೀ ರಿನೊಂದಿಗೆ ಸೇರದಂತೆ ಕ್ರಮವಹಿಸ ಬೇಕು. ಟ್ಯಾಂಕ್ಗಳನ್ನು ಕಾಲ,ಕಾಲಕ್ಕೆ ಸ್ವಚ್ಛಗೊಳಿಸಬೇಕು.
ಮುಂದಿನ ಒಂದು ವಾರದೊಳಗೆ ಜಿಲ್ಲೆಯ ಎಲ್ಲ ಒವರ್ಹೆಡ್ ಟ್ಯಾಂಕ್ಗಳು ಸ್ವಚ್ಛವಾಗಬೇಕು. ಕೊಳವೆಬಾವಿಗಳ ಸುತ್ತ ಯಾವುದೇ ಕ ಲುಷಿತ ನೀರು ನೀರು ನಿಲ್ಲದಂತೆ ಹಾಗೂ ಕೊಳಚೆ ನೀರು ಸರಾಗವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆಯನ್ನು ಖಚಿತ ಪಡಿಸಿಕೊಳ್ಳ ಬೇಕು. ನೀರಿನ ಮೂಲದ ಸುತ್ತ ಕಾಂಕ್ರಿಟ್ ಕಟ್ಟೆ ನಿರ್ಮಿಸಬೇಕೆಂದರು.
ಜಿಲ್ಲಾ,ತಾಲೂಕು ಪ್ರಯೋಗಾಲಯಗಳ ವ್ಯಾಪ್ತಿ ಕುಡಿಯುವ ನೀರಿನ ಮೂಲಗಳ ಗುಣಮಟ್ಟದ ಪರೀಕ್ಷೆಗಳನ್ನು,ಮಳೆ ಗಾಲ ಮುನ್ನ ಮತ್ತು ಮಳೆಗಾಲದ ನಂತರ ಕಡ್ಡಾಯವಾಗಿ ಮಾಡಿಸಬೇಕು.ಕಲುಷಿತ ಎಂದು ಗೊತ್ತಾದರೆ ಕೂಡಲೇ ಕುಡಿವ ನೀರಿಗೆ ಪರ್ಯಾಯ ವ್ಯ ವಸ್ಥೆ ಕಲ್ಪಿಸಬೇಕೆಂದರು, ಇಒಗಳು ಮಾಸಿಕ ಪ್ರಯೋಗಾಲಯಗಳ ಪ್ರಗತಿ ಪರಿಶೀಲಿಸಬೇಕೆಂದರು. ಕಲುಷಿತ ನೀರಿನ ಸೇವನೆ ಅವಘ ಡಗಳನ್ನು ತಪ್ಪಿಸಲು ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕೆಂದರು. ಜಿಪಂ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ ಮಾತನಾಡಿ,ಕುಡಿವ ನೀರು ಪೂರೈಕೆಗೆ ಸಂಬಂಧಿಸಿದಂತೆ ಅಧಿಕಾರಿ,ಸಿಬ್ಬಂದಿಗೆ ತರಬೇತಿ ಕೊಡುವಂತೆ ಸೂಚಿಸಿದರು.
ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಸುರಕ್ಷಿತ ಕುಡಿಯುವ ನೀರು ಬಳಕೆ ಕುರಿತಂತೆ ಜೂ.11ರಿಂದ ಆರಂಭವಾಗಿರುವ ಸ್ವಚ್ಛತಾ ಅಭಿಯಾನ ಒಂದು ವಾರ ನಡೆಯಲಿದೆ. ಈ ಅಭಿಯಾನವನ್ನು ಸಮರ್ಪಕವಾಗಿ ಆಯೋಜಿಸಬೇಕು. ಸಂಬಂಧಿಸಿದ ವರದಿಯನ್ನು 21ರೊಳಗೆ ಜಿ ಪಂಕ್ಕೆ ಸಲ್ಲಿಸುವಂತೆ ಸಿಇಒ ತಿಳಿಸಿದರು. ನರೇಗಾ ಪ್ರಗತಿ ಪರಿಶೀಲಿಸಲಾಯಿತು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾ ಖೆ ಕಾರ್ಯ ಪಾಲಕ ಇಂಜಿನಿಯರ್ ಬಸವನಗೌಡ ಮೇಟಿಪಾಟೀಲ,ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ್, ಚಿತ್ರದುರ್ಗ ತಾಪಂ ಇಒ ಹನುಮಂತಪ್ಪ ಅಧಿಕಾರಿಗಳಿದ್ದರು.