

ಶಹಾಪುರ: ಮಳೆಗಾಲ ಆರಂಭವಾಗಿದ್ದು, ಕುಡಿಯುವ ನೀರಿನ ಮೂಲಗಳಲ್ಲಿ ಕಲುಷಿತ ನೀರು ಸೇರದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರ್ಡಿಯಾ ಹೇಳಿದರು.
ತಾಪಂ ಸಭಾಂಗಣದಲ್ಲಿ ಮಂಗಳವಾರ ವಡಗೇರಾ ಮತ್ತು ಶಹಾಪುರ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಒಗ್ಗೂಡಿಕೆಯಲ್ಲಿ ಅನುಷ್ಟಾನ, ನಿರ್ವಹಣೆ ಮಾಡುತ್ತಿರುವ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆ ಹಾಗೂ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನೀರಿನಿಂದ ವಾಂತಿ-ಭೇದಿ ಪ್ರಕರಣ ಉಂಟಾಗದAತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಸೂಚಿಸಿದರು.
ಗ್ರಾಮಗಳಲ್ಲಿ ಪೂರೈಸುವ ಕುಡಿಯುವ ನೀರಿನ ಪೈಪ್‌ಗಳು ಒಡೆದು, ನೀರು ಸೋರಿಕೆಯಾಗಿ, ಕಲುಷಿತ ನೀರು ಕುಡಿಯುವ ನೀರು ಪೈಪ್ ಮೂಲಕ ಜನರ ಮನೆಗೆ ಪೂರೈಕೆಯಾಗದಂತೆ ನೋಡಿಕೊಳ್ಳಬೇಕು. ಬಾವಿಗಳಲ್ಲಿ ಬ್ಲಿಚಿಂಗ್ ಪೌಡರ್ ಹಾಕಿ, ಕುಡಿಯುವ ನೀರು ಸಂಗ್ರಹಿಸುವ ಒಎಚ್‌ಟಿಗಳನ್ನು ತಿಂಗಳಲ್ಲಿ ಎರಡು ಭಾರಿ ಸ್ವಚ್ಛಗೊಳಿಸಿ ಎಂದು ಸೂಚಿಸಿದರು.
ಮಳೆಗಾಲದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಚರಂಡಿ, ತಗ್ಗು, ಗುಂಡಿಗಳಲ್ಲಿ ಮಳೆ ನೀರು ನಿಲ್ಲದಂತೆ ನಿಗಾ ಇರಲಿ, ನಿಂತ ನೀರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಮಕ್ಕಳಿಗೆ, ಗರ್ಭಿಣಿ ಮಹಿಳೆ, ಮನುಷ್ಯರಿಗೆ ಕಚ್ಚುವುದರಿಂದ ಡೆಂಘೆ, ಆನೆಕಾಲು, ಟೈಫಾಯಡ್ ಜ್ವರ, ಮಲೇರಿಯಾ ಸೇರಿ ಇತರೆ ಕಾಯಿಲೆ ಬರುವುದನ್ನು ತಡೆಯಲು ಗ್ರಾಮದಲ್ಲಿ ಸ್ವಚ್ಛ ನೈರ್ಮಲ್ಯ ಕಾಪಾಡಲು ಆದ್ಯತೆ ನೀಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ವೇಳೆ ಜಿಪಂ ಉಪ ಕಾರ್ಯದರ್ಶಿ ವಿಜಯ ಕುಮಾರ ಮಡ್ಡೆ, ಯೋಜನಾ ನಿರ್ದೇಶಕ ಸಿ.ಬಿ. ದೇವರಮನಿ, ಮುಖ್ಯ ಯೋಜನಾಧಿಕಾರಿ ಕÀÄಮಲಯ್ಯ, ಶಹಾಪುರ-ವಡಗೇರಾ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಬೈ,ಮಲ್ಲಿಕಾರ್ಜುನ ಸಂಗ್ವಾರ, ಪಂಚಾಯತ ರಾಜ್, ಕೆಆರ್‌ಐಡಿಎಲï, ಕುಡಿಯುವ ನೀರು ಮತ್ತು ನೈರ್ಮಲ್ಯ, ಶಿP್ಷÀಣ, ಕೃಷಿ, ಸಿಡಿಪಿಒ, ತೋಟಗಾರಿಕೆ, ಮೀನುಗಾರಿಕೆ, ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಇತರರಿದ್ದರು.--