ಕಲುಷಿತ ನೀರಿಗೆ ಮುಕ್ತಿ ನೀಡಿ

water
ಸುಳ್ಯ ನಪಂ ವತಿಯಿಂದ ಸರಬರಾಜಾಗುತ್ತಿರುವ ಕುಡಿಯುವ ನೀರು ಕೆಸರು ಮಿಶ್ರಿತವಾಗಿರುವುದು.
Published on

ಕಲಬುರಗಿ: ನಗರದ ಅರ್ಧಕ್ಕಿಂತ ಹೆಚ್ಚು ಭಾಗದಲ್ಲಿ ಕಲುಷಿತ ನೀರು ಪೂರೈಕೆ ಆಗುತ್ತಿದೆ. ಪಾಲಿಕೆ, ನೀರು ಸರಬರಾಜು ಮಂಡಳಿ ಹಾಗೂ ಎಲ್ ಆ್ಯಂಡ್ ಟಿ ಕಂಪನಿ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ವೆಲ್ಫೇರ್ ಪಾರ್ಟಿ ಆï ಇಂಡಿಯಾ ಜಿಲ್ಲಾಧ್ಯಕ್ಷ ಎಂ.ಎ.ಖದೀರ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪಾಲಿಕೆಯ ನೀರು ಪ್ರದರ್ಶಿಸುತ್ತ ಮಾತನಾಡಿದ ಅವರು, ನಗರದಲ್ಲಿ ಪೂರೈಕೆ ಆಗುತ್ತಿರುವ ನೀರು ಕುಡಿಯಲಷ್ಟೇ ಅಲ್ಲ, ಮನೆ ಬಳಸಲೂ ಯೋಗ್ಯವಿಲ್ಲ. ಮಳೆಗಾಲದ ಆರಂಭದಲ್ಲಿ ಕಲುಷಿತ ನೀರು ಬಂದರೆ ಸರಿ, ತಿಂಗಳುಗಟ್ಟಲೇ ಅದೇ ನೀರು ಬಂದರೆ ಹೇಗೆ ಎಂದು ಕಿಡಿ ಕಾರಿದರು.
ಕಲುಷಿತ ನೀರಿನಿಂದ ಜನರಲ್ಲಿ ಆರೋಗ್ಯ ಸಮಸ್ಯೆ ಸೃಷ್ಟಿಯಾಗುತ್ತಿದ್ದು, ಜನರು ನೀರು ಖರೀದಿಸಿ ಕುಡಿಯುವಂತ ಸ್ಥಿತಿ ಸೃಷ್ಟಿಯಾಗಿದೆ. ಬಡವರು ನಿತ್ಯ ಕುಡಿಯುವ ನೀರಿಗೆ ೫೦ ರೂ. ಖರ್ಚು ಮಾಡುವಂತಾಗಿದೆ. ಪಾಲಿಕೆಯೂ ನೀರಿನ ಕರ ಪಡೆಯುತ್ತದೆ. ತಿಂಗಳಲ್ಲಿ ಒಂದೆರಡು ದಿನ ಮಾತ್ರ ನೀರು ಪೂರೈಸದೇ ನಿತ್ಯ ಪೂರೈಸಬೇಕು ಎಂದು ಆಗ್ರಹಿಸಿದರು.
ನಗರದಲ್ಲಿ ಎಲ್ ಆ್ಯಂಡ್ ಟಿ ಕಂಪನಿಯೂ ಎಲ್ಲೆಂದರಲ್ಲಿ ತಗ್ಗು ತೋಡಿ, ರಸ್ತೆ ಹಾಳು ಮಾಡಿದೆ. ಪ್ರಶ್ನಿಸಿದರೆ ಉತ್ತರವೇ ದೊರೆಯುತ್ತಿಲ್ಲ. ಕಾಮಗಾರಿಗೆ ವೇಗ ನೀಡಬೇಕು. ೩೦ ದಿನದಲ್ಲಿ ಕಲುಷಿತ ನೀರಿನ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಕಾರ್ಯದರ್ಶಿ ಮುಬೀನ್ ಅಹ್ಮದ್, ಜಿಲ್ಲಾ ಕಾರ್ಯಾಧ್ಯಕ್ಷ ಅಬ್ದುಲ್ ಸಲೀಂ ಚಿತ್ತಾಪೂರಿ, ಬಾಬಾ ಸಾಹೇಬ್ ಹುಂಡೇಕಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net