ಕಲುಷಿತ ಆಹಾರ ಸೇವನೆ | ಹಿರೇಕೂಡಿ ವಸತಿ ಶಾಲೆಯ 30 ವಿದ್ಯಾರ್ಥಿಗಳು ಅಸ್ವಸ್ಥ!

3Anand9
Published on

ಕಲುಷಿತ ಆಹಾರ ಸೇವನೆ

| ಹಿರೇಕೂಡಿ ವಸತಿ ಶಾಲೆಯ 30 ವಿದ್ಯಾರ್ಥಿಗಳು ಅಸ್ವಸ್ಥ!

ಚಿಕ್ಕೋಡಿ: ತಾಲೂಕಿನ ಹಿರೇಕೊಡಿಯ ಅಲ್ಪಸಂಖ್ಯಾತರ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೆಲ ದಿನಗಳ ಹಿಂದೆಯಷ್ಟೆ ಕಲುಷಿತ ಆಹಾರ ಸೇವಿಸಿ ಸುಮಾರು 140ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದ ಪ್ರಕರಣ ಮಾಸುವೇ ಮುನ್ನವೇ ಮತ್ತೆ ಕಲುಷಿತ ಆಹಾರ ಸೇವಿಸಿ 30ಕ್ಕೂ ಅಧಿಕ ಮಕ್ಕಳು ಭಾನುವಾರ ಅಸ್ವಸ್ತಗೊಂಡಿದ್ದಾರೆ.

ವಸತಿ ಶಾಲೆಯ ಒಟ್ಟು 30ಕ್ಕೂ ಅಧಿಕ ವಿದ್ಯಾರ್ಥಿಗಳು ವಾಂತಿ ಭೇದಿಯಿಂದ ಭಾನುವಾರ ತಡರಾತ್ರಿ ಬಳಲಿದ್ದಾರೆ .ಇದರಲ್ಲಿ ಸಾಮಾನ್ಯ ಲಕ್ಷ್ಮಣವಿರುವ 15 ವಿದ್ಯಾರ್ಥಿಗಳು ಮುರಾರ್ಜಿ ಶಾಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಹಾಗು ಏಳು ವಿದ್ಯಾರ್ಥಿಗಳು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net