

ಕಾಗವಾಡ: ಗುರುಗಳು ಹೆಮ್ಮೆ ಪಡುವಂತೆ ವಿದ್ಯಾರ್ಥಿಗಳು ಬೆಳೆದು ಶಾಲೆಯ ಕೀರ್ತಿ ಹೆಚ್ಚಿಸಬೇಕು ಎಂದು ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ದೈಹಿಕ ಶಿಕ್ಷಣ ಪರಿವೀಕ್ಷಕ ಮಹಾವೀರ ಜೀರಗ್ಯಾಳ ಹೇಳಿದರು.
ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಸನ್ಮತಿ ವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಲಿತ ಶಾಲೆಯ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದು, ಸಂತಸವನ್ನುಂಟು ಮಾಡಿದೆ. ವಿದ್ಯಾರ್ಥಿಗಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕು ಎಂದರು.
ಹಳೆಯ ವಿದ್ಯಾರ್ಥಿ ಉತ್ತಮ ತಳವಾರ ಮಾರ್ಗದರ್ಶನ ಮಾಡಿದರು. ಗಣ್ಯರು ಹಾಗೂ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು.
ಎಸ್‌ಎಸ್‌ಎಸ್ ಸಮಿತಿಯ ಅಧ್ಯಕ್ಷ ವಿನೋದ ಬರಗಾಲೆ, ಉಪಾಧ್ಯಕ್ಷ ಅಜಿತ್ ನಾಂದ್ರೆ, ನಿರ್ದೇಶಕ ಎಲ್.ವಿ. ಸಂಗೋರಾಮ, ಆರ್.ವಿ.ಸಂಗೋರಾಮ, ಎಸ್.ಎಂ.ಕುಸನಾಳೆ, ಅಶೋಕ ಪಾಟೀಲ, ಮಹಾವೀರ ಪಾಟೀಲ, ಸನ್ಮತಿ ಪಾಟೀಲ, ಅಶ್ವತಕುಮಾರ ಪಾಟೀಲ, ಕುಮಾರ ಮಾಲಗಾಂವೆ, ರಾಹುಲ ಸವದತ್ತಿ, ಸಾವಿತ್ರಿ ದೊಡ್ಡನ್ನವರ, ಅಕ್ಕಾತಾಯಿ ಮುಜಾವರ, ಸುನೀತಾ ಮಾಕನ್ನವರ ಇತರರಿದ್ದರು.