ಕಲಿಕೆಯೊಂದಿಗೆ ಆಟಕ್ಕೂ ಮಹತ್ವ ನೀಡಿ

Emphasize play along with learning
ಇಂಡಿಯ ಎಸ್‌ಜಿಬಿ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಎಸಿ ಅಬೀದ್ ಗದ್ಯಾಳ ಚಾಲನೆ ನೀಡಿದರು. ಮೌಲಾನಾ ಜಿಯಾಉಲ್ ಹಜ್ ಉಮರಿ, ಎಸ್.ಆರ್. ನಡಗಡ್ಡಿ, ಪ್ರಕಾಶ ಐರೋಡಗಿ, ಎಸ್.ಎಸ್. ಲಾಳಸೇರಿ, ಸತಾರ ಬಾಗವಾನ ಇತರರಿದ್ದರು.
Published on

ಇಂಡಿ: ಕ್ರೀಡೆಗಳು ವಿದ್ಯಾರ್ಥಿಗಳ ದೈಹಿಕ ಶಕ್ತಿ ಸದೃಢಗೊಳಿಸುವ ಮೂಲಕ ಮಾನಸಿಕ ಆರೋಗ್ಯವಂತರನ್ನಾಗಿಸುತ್ತದೆ. ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕಲಿಕೆಯ ಜತೆ ಆಟದತ್ತಲೂ ಮಹತ್ವ ನೀಡಬೇಕು ಎಂದು ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.

ಪಟ್ಟಣದ ಎಸ್‌ಜಿಬಿ ಆಂಗ್ಲಮಾಧ್ಯಮ ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಜಿಪಂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಾಥಮಿಕ ಶಾಲೆ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್. ನಡಗಡ್ಡಿ, ತಾಲೂಕು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ ಐರೋಡಗಿ, ಎಸ್.ಎಸ್. ಲಾಳಸೇರಿ ಮಾತನಾಡಿದರು. ಮೌಲಾನಾ ಜಿಯಾಉಲ್ ಹಜ್ ಉಮರಿ ಸಾನ್ನಿಧ್ಯ ವಹಿಸಿದ್ದರು.

ಎಸ್‌ಜಿ ಬಿ ಸಂಸ್ಥೆಯ ಅಧ್ಯಕ್ಷ ಸತಾರ ಬಾಗವಾನ, ಅಂಜುಮನ್ ಅಧ್ಯಕ್ಷ ಅಫಜಲ್ ಹವಾಲ್ದಾರ, ಇಲಿಯಾಸ ಬೋರಾಮಣಿ, ಶಂಕರ ಚವ್ಹಾಣ, ಎಚ್.ಎಂ. ಬಿಳವಾರ, ಎಸ್.ಡಿ. ಪಾಟೀಲ, ಎಸ್.ವಿ. ಹರಳಯ್ಯ, ಆರ್.ಎಸ್. ಬಾಬರ್, ತುಕಾರಾಮ ಹೊಸಮನಿ, ಮಂಜುನಾಥ ನಾಯ್ಕೋಡಿ, ವಸೀಂಅಕ್ರಂ ಬೋಸ್ಕೆ, ಮೈನುದೀನ ಶೇಖ, ಎಸ್‌ಪಿ ಓಂಕಾರಿ, ಆಲ್‌ಹಜ್ ಮುಗಳಿ, ಅಮೀನಸಾಬ ಬಾಗವಾನ, ಜಟ್ಟೆಪ್ಪ ರವಳಿ, ಜೈನುದೀನ ಬಾಗವಾನ, ರಹಿಮಾನ ಅಂತೋಲೆ, ಎನ್.ಕೆ. ಪಠಾಣ, ಜಹಾಂಗೀರ ಸೌದಾಗರ, ಮೊಹಮ್ಮದ ಬೇಪಾರಿ, ಪುರಸಭೆ ಮಾಜಿ ಸದಸ್ಯ ಜೈನುದೀನ ಬಾಗವಾನ, ಮಹೇಶ ಮಡಿವಾಳ, ಹಣಮಂತ ಹದಗಲ್, ತಾಲೂಕು ಸಿಆರ್‌ಸಿ, ಬಿಆರ್‌ಸಿ ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net