ಕಲಿಕೆಯೇ ಜೀವನಕ್ಕೆ ಮಾರ್ಗದರ್ಶಿಯಾಗಲಿ

28blrp3
Published on


ಬೇಲೂರು: ಬೇಸಿಗೆ ಶಿಬಿರದ ಕಲಿಕೆ ಜೀವನಕ್ಕೆ ಮಾರ್ಗದರ್ಶಿಯಾಗಲಿ ಎಂದು ಅನುಘಟ್ಟ ಗ್ರಂಥಾಲಯದ ಗ್ರಂಥ ಪಾಲಕಿ ಭಾಗೀರಥಿ ಹೇಳಿದರು. ಅನುಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ ಅಂಗವಾಗಿ ಭಾನುವಾರ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಬೇಸಿಗೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
9 ದಿನಗಳ ಶಿಬಿರದಲ್ಲಿ ವಿದ್ಯಾರ್ಥಿಗಳು ಹಲವು ವಿಷಯ ಕಲಿತಿದ್ದಾರೆ. ಪುಸ್ತಕ, ದಿನಪತ್ರಿಕೆ, ಕಥೆ ಪುಸ್ತಕಗಳ ಬಗ್ಗೆ ಒಲವು ಮೂಡಿಸಿಕೊಂಡಿದ್ದಾರೆ. ಓದುವ ಪ್ರೇರೇಪಣೆ ಪಡೆದಿದ್ದಾರೆ. ಇದು ಶ್ಲಾಘನೀಯ ಎಂದರು.
ಮಕ್ಕಳು ವೈಜ್ಞಾನಿಕ ಪ್ರಯೋಗ, ಕಂಪ್ಯೂಟರ್‌ನಲ್ಲಿ ಕನ್ನಡ, ಕ್ರಾಫ್ಟ್, ವಿವಿಧ ಆಟೋಟ ಸ್ಪರ್ಧೆಯ ತರಬೇತಿಯೊಂದಿಗೆ ಮನೋರಂಜನಾ ಚಟುವಟಿಕೆಗಳಲ್ಲೂ ಭಾಗವಹಿಸಿದ್ದಾರೆ. ಇಂಥ ಮಕ್ಕಳೊಂದಿಗೆ ಬೆರೆಯುವುದೂ ಒಂದು ಯೋಗ ಎಂದರು.
ವಿದ್ಯಾರ್ಥಿನಿ ವರ್ಷಾ ಮಾತನಾಡಿ, ಬೇಸಿಗೆ ಶಿಬಿರದಲ್ಲಿ ಕಥೆ ಪುಸ್ತಕಗಳನ್ನು ಓದಲು ಕಲಿತೆವು. ಕಂಪ್ಯೂಟರ್, ಕೊಳವೆ ಶಕ್ತಿಯ ವೈಜ್ಞಾನಿಕ ಪ್ರಯೋಗ, ಚಿತ್ರ ಬಿಡಿಸುವ ತರಬೇತಿ ದೊರಕಿತು ಎಂದಳು.
ಅನುಘಟ್ಟ ಗ್ರಾಮ ಪಂಚಾಯಿತಿ ಪಿಡಿಒ ನಾಗಭೂಷಣ್, ಅಧ್ಯಕ್ಷೆ ದೀಪು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ವ್ಯವಸ್ಥಾಪಕ ಸತೀಶ್ ಹಾಗೂ ಪಾಲಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net