

ವಿಜಯವಾಣಿ ಸುದ್ದಿಜಾಲ ಧಾರವಾಡ
ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಎಲ್ಲ ವಿಷಯಗಳ ಕಲಿಕೆಗೆ ಮೂಲ. ನಮ್ಮಲ್ಲಿರುವ ಕಲಿಕೆಯ ಕುತೂಹಲವೇ ಹೊಸ ಆವಿಷ್ಕಾರಗಳಿಗೆ ನಾಂದಿಯಾಗುತ್ತದೆ ಎಂದು ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫ0ಡಮೆ0ಟಲ್ ರಿಸರ್ಚ್ನ ಪ್ರಾಧ್ಯಾಪಕ, ಪದ್ಮಶ್ರೀ ಡಾ. ರಾಮಕೃಷ್ಣ ವಿ. ಹೊಸೂರ ಹೇಳಿದರು.
ನಗರದ ಶ್ರೀಮತಿ. ವಿದ್ಯಾ. ಪಿ. ಹಂಚಿನಮನಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ `ವಿಪಿಎಚ್ ಸಮ್ಮಾನ್' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಣಿತ ಮೂಲ ವಿಜ್ಞಾನ ವಿಷಯಗಳು ಕಷ್ಟವಲ್ಲ, ಸುಲಭವೂ ಅಲ್ಲ. ಮೂಲ ವಿಜ್ಞಾನದ ಕಲಿಕೆ ಮತ್ತು ಸಂಶೋಧನೆಯತ್ತ ಯುವ ಪೀಳಿಗೆ ಹೆಚ್ಚು ಆಸಕ್ತಿ ತೋರಿಸಬೇಕು ಎಂದರು.
ನ0ತರ `ವಿಜ್ಞಾನ ಕಲಿಕೆಯಲ್ಲಿ ಆನಂದ' ಎಂಬ ವಿಷಯವನ್ನಾಧರಿಸಿ ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಸಂಸ್ಥೆಯ ಸಹ ಕಾರ್ಯದರ್ಶಿ ವರ್ಷಾ ಹಂಚಿನಮನಿ ಡಾ. ರಾಮಕೃಷ್ಣ ಹೊಸೂರ ಅವರನ್ನು ಸನ್ಮ್ಮಾನಿಸಿದರು. ಶಾಂತೇಶ ಎಜುಕೇಶನ್ ಸೊಸೈಟಿಯ ಚೇರ್ಮನ್ ಪ್ರೊ. ಪ್ರಲ್ಹಾದ ಹಂಚಿನಮನಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ವಿದ್ವಾನ್ ನವೀನ್ ಭಟ್ ಸ್ವಾಗತಿಸಿದರು. ಡಾ. ಗಿರಿಧರ ಕಿನ್ನಾಳ, ಸಿ.ಯು. ಬೆಳ್ಳಕ್ಕಿ, ಇತರರಿದ್ದರು.
ಮೋನಿಕಾ ಹಳ್ಳಿ ನಿರೂಪಿಸಿದರು. ರಮ್ಯಾ ಉಪಾಧ್ಯೆ ಪ್ರಾರ್ಥಿಸಿದರು. ರುಕ್ಸಾನಾ ವಂದಿಸಿದರು.