ಕಲಿಕಾ ಹಬ್ಬದಿಂದ ಮೌಲ್ಯಮಾಪನ

TKE kalika
ಬೇಲೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಬಿಇಒ ಎಚ್.ಪರಶುರಾಮ್ ಉದ್ಘಾಟಿಸಿದರು. ಸಿ.ಆರ್.ಅನಂತಪ್ಪ, ಎಸ್.ಧರಣೇಶ್, ಆನಂದ್‌ಕುಮಾರ್, ಬಿ.ಆರ್.ವೆಂಕಟೇಶ್, ಎಂ.ಬಿ.ರಾಮಚಂದ್ರಪ್ಪ, ಕೆ.ನಂಜುಂಡಸ್ವಾಮಿ ಇತರರಿದ್ದರು.
Published on

ತರೀಕೆರೆ: ಕಲಿಕಾ ಹಬ್ಬದ ಔಚಿತ್ಯ ಮಕ್ಕಳ ಕಲಿಕೆಯ ಮೌಲ್ಯ ಮಾಪನ ಮಾಡುವುದಾಗಿದೆ ಎಂದು ಬಿಇಒ ಎಚ್.ಪರಶುರಾಮಪ್ಪ ತಿಳಿಸಿದರು.

ಬೇಲೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ತಾಪಂ, ಶಾಲಾ ಶಿಕ್ಷಣ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಬೇಲೇನಹಳ್ಳಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಹೆಚ್ಚಿಸುವ ನಿಟ್ಟಿನಲ್ಲಿ ಮಾತ್ರವಲ್ಲ, 9 ವರ್ಷದೊಳಗಿನ ಮಕ್ಕಳು ಯಾವ ರೀತಿ ಕಲಿಕಾ ಸಾಮರ್ಥ್ಯ ಹೊಂದಿರಬೇಕು ಎಂಬ ದಿಸೆಯಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ಇಂಥ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಮಾತುಗಾರಿಕೆ, ಬರವಣಿಗೆ ಬಳಿಕ ಕಲಿಕೆ ಪ್ರಕ್ರಿಯೆ ಆರಂಭಗೊಳ್ಳಲು ಸಹಕಾರಿಯಾಗಲಿದೆ ಎಂದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಆರ್.ಅನಂತಪ್ಪ ಮಾತನಾಡಿ, ಪ್ರತಿಭಾ ಕಾರಂಜಿ ಕಾರ್ಯಕ್ರಮ ಮಕ್ಕಳ ಸುಪ್ತ ಪ್ರತಿಭೆ ಅನಾವರಣಗೊಳಿಸಲು ಪೂರಕವಾದರೆ, ಕಲಿಕಾ ಹಬ್ಬದಂಥ ಕಾರ್ಯಕ್ರಮ ಶೈಕ್ಷಣಿಕ ಚಟುವಟಿಕೆಗೆ ಉಪಯುಕ್ತವಾಗಲಿದೆ. ಸರ್ಕಾರಿ ಶಾಲೆಗಳಲ್ಲಿ ಮೌಲ್ಯದ ಜತೆ ನೈತಿಕ ಶಿಕ್ಷಣ ಸಿಗುತ್ತಿದ್ದು, ಪಾಲಕರು ಸರ್ಕಾರಿ ಶಾಲೆಯಲ್ಲೇ ಮಕ್ಕಳನ್ನು ಕಲಿಸಲು ಮುಂದಾಗಬೇಕು ಎಂದರು.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಧರಣೇಶ್, ಕಾರ್ಯದರ್ಶಿ ಆನಂದ್‌ಕುಮಾರ್, ಬಿ.ಆರ್.ವೆಂಕಟೇಶ್, ಎಂ.ಬಿ.ರಾಮಚಂದ್ರಪ್ಪ, ಡಿ.ಮಂಜುನಾಥ್, ಎನ್.ಇ.ಮೀನಾಕ್ಷಮ್ಮ, ಜಿ.ಕೆ.ಮರಿದಿಮ್ಮಯ್ಯ, ಶಿಲ್ಪಾ, ಎಸ್.ಬಿ.ಸುನೀತಾ, ಕೆ.ನಂಜುಂಡಸ್ವಾಮಿ, ಆರ್.ದೇವೇಂದ್ರಪ್ಪ, ಎಚ್.ಟಿ.ತಿಪ್ಪೇಶಪ್ಪ, ಟಿ.ಮಂಜುನಾಥ್, ಆಶಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net