

ಬಸವಕಲ್ಯಾಣ: ಶಿಕ್ಷಣದಿಂದ ಮನುಷ್ಯ ಅರಿವನ್ನು ಪಡೆಯಲು ಸಾಧ್ಯ, ಅರಿವಿನ ಪ್ರಜ್ಞೆ ಆತನನ್ನು ಮಹತ್ತರ ಸಾಧನೆ ಹಂತಕ್ಕೆ ತಲುಪಿಸುತ್ತದೆ ಎಂದು ಎಸ್‌ಐಒ ಅಧ್ಯಕ್ಷ ಜೀಶಾನ್ ಅಖಿಲ್ ಸಿದ್ದಿಕಿ ಹೇಳಿದರು.
ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಸ್ಟುಡೆಂಡ್ ಇಸ್ಲಾಮಿಕ್ ಆರ್ಗನೈಸೇಷನ್ (ಎಸ್‌ಐಒ) ನಿಂದ ಅರಿವಿನ ನಾಳೆಗಾಗಿ ಕ್ಯಾಂಪಸ್ ಅಭಿಯಾನದ ನಿಮಿತ್ತ ಆಯೋಜಿಸಿದ್ದ ವಿದ್ಯಾರ್ಥಿ ಸಮಾವೇಶದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಪಾಠ, ಪ್ರವಚನದ ಆಶಯ ಅರ್ಥ ಮಾಡಿಕೊಂಡು ಕಲಿಕಾ ಹಂತದ ಶೈಕ್ಷಣಿಕ ಮೌಲ್ಯ ಅಳವಡಿಸಿಕೊಂಡರೆ ಯಶಸ್ವಿ ಆಗುವ ಜತೆಗೆ ಪ್ರಬುದ್ಧ ಸಮಾಜ ಕಟ್ಟಲು ಸಾಧ್ಯ ಎಂದರು.
ಅರಿವಿನ ನಾಳೆಗಾಗಿ ಕ್ಯಾಂಪಸ್ ಅಭಿಯಾನದ ನಿಮಿತ್ತ ನಗರದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಗರದಿಂದ ಕೇಂದ್ರಿಯ ವಿಶ್ವ ವಿದ್ಯಾಲಯಕ್ಕೆ ದಾಖಲಾತಿ ಪಡೆದ ಮತ್ತು ಪಿಎಚ್‌ಡಿ ಅಧ್ಯಯನ ಪೂರೈಸಿದ ವಿದ್ಯಾರ್ಥಿಗಳಿಗೆ ಹಾಗೂ ನೀಟ್ ಮತ್ತು ಸಿಇಟಿ ಪರೀಕ್ಷೆಯಲ್ಲಿ ನಗರಕ್ಕೆ ಪ್ರಥಮ, ದ್ವೀತಿಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಬಿಆರ್‌ಪಿ ಶಾಲಿವಾನ ಬಿರಾದಾರ, ಎಸ್‌ಐಒ ಜಿಲ್ಲಾಧ್ಯಕ್ಷ ಡಾ. ಜಬೀಹುಲ್ಲಾ ಖಾನ್, ಸ್ಥಾನೀಯ ಅಧ್ಯಕ್ಷ ಸೈಯದ್ ಜಾವೀದ್, ಪ್ರಮುಖರಾದ ಇಮಾಮುದ್ದಿನ್, ರಿಯಾಜ್ ಪಟೇಲ್, ನೈಮುದ್ದಿನ್ ಚಾಬುಕಸವಾರ ಇತರರಿದ್ದರು.