

ಚಿತ್ರದುರ್ಗ:ಮಕ್ಕಳ ಕಲಿಕಾ ಸಾಮರ್ಥ್ಯ ಗುರುತಿಸಿ ಶಿಕ್ಷಕರು ಮಾರ್ಗದರ್ಶನ ನೀಡಬೇಕೆಂದು ಡಯಟ್ ಉಪನ್ಯಾಸಕ ಕೆ.ಜಿ.ಪ್ರಶಾಂ ತ್ ಹೇಳಿದರು.
ತಾಲೂಕಿನ ಹಳಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಬೆಟ್ಟದ ನಾಗೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಗೆ ಶುಕ್ರವಾರ ಭೇಟಿ ನೀಡಿ ಮಕ್ಕಳ ಕಲಿಕಾ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿದ ಅವರು,ಕಲಿಕೆಯಲ್ಲಿ ವೈಯಕ್ತಿಕ ಭಿನ್ನತೆ ಯಿದ್ದು ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಪೂರಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಉಪನ್ಯಾಸಕರಾದ ಯು.ಸಿದ್ದೇಶಿ,ಜಿ.ಎಸ್.ನಾಗರಾಜು,ಬಿ.ಎಸ್.ನಿತ್ಯಾನಂದ,ಸ್.ಬಸವರಾಜು ಮಾತನಾಡಿದರು. ಮುಖ್ಯಶಿಕ್ಷಕ ರಾದ ಕೆ.ಎಚ್.ತಿಪ್ಪೇಸ್ವಾಮಿ,ಮುಸ್ತಾಕ್ ಅಹಮದ್,ಸಹ ಶಿಕ್ಷಕರಾದ ಟಿ.ಗೀತಾಬಾಯಿ,ಎನ್.ಮಾಲಿನಿ,ಜಿ.ಶಂಕರಪ್ಪ,ಎಂ.ರಜಿನಿ,ಎನ್. ಆರ್.ತಿಮ್ಮಪ್ಪ,ಪಿ.ಎಸ್.ನಾಗರಾಜಪ್ಪ, ಡಿ.ಆಂಜನಯ್ಯ ಮತ್ತಿತರರಿದ್ದರು.