ಕಲಾಸೇತು ಕಾರ್ಯಕ್ರಮ

b95352cc-1158-4d26-8431-c209c0d03fdf
Published on

ಮೈಸೂರು: ವಿ-ಕೇರ್ ಸಂಸ್ಥೆ ವತಿಯಿಂದ ಕಲಾಸೇತು ಕಾರ್ಯಕ್ರಮ ವೀಣೆ ಶೇಷಣ್ಣ ಭವನದಲ್ಲಿ ಭಾನುವಾರ ಸಂಜೆ ನಡೆಯಿತು.

ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಬೆಂಗಳೂರಿನ ಅಚ್ಚಿ ಶಾಸ್ತ್ರೀಯ ನೃತ್ಯ ಕೇಂದ್ರದ ಕಲಾವಿದರಾದ ಇನಿ ಮಹೇಶ್, ನಿಮೀಲಿತಾ, ಹಿಮಾನ್ಯ ಅವರು ಭರತನಾಟ್ಯವನ್ನು ಪ್ರಸ್ತುತ ಪಡಿಸಿದರು.

ಡಿವಿಜಿಯವರ ಮಂಕುತಿಮ್ಮನ ಕಗ್ಗದಲ್ಲಿ ಕಲೆ-ಬದುಕು-ಸಮಾಜದ ಕುರಿತು ಜಾನಪದ ತಜ್ಞ ಡಾ.ಕ್ಯಾತನಹಳ್ಳಿ ರಾಮಣ್ಣ, ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ ಅವರೊಂದಿಗೆ ಸಂವಾದ ನಡೆಯಿತು. ಕಗ್ಗ-ಮಾರ್ಗದ ಕುರಿತು ವಿದುಷಿರಾದ ಪದ್ಮಿನಿ ಅಚ್ಚಿ, ಸ್ನೇಹ ಕಪ್ಪಣ್ಣ ಅವರಿಂದ ವಿಶೇಷ ಭರತನಾಟ್ಯ ಪ್ರದರ್ಶನ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net