

ಚಿತ್ರದುರ್ಗ: ಕಲೆ, ಸಾಹಿತ್ಯ ನಶಿಸುತ್ತಿರುವ ಇಂದಿನ ಆಧುನಿಕ ಕಾಲಘಟ್ಟದಲ್ಲಿ ನಗರದ ನಾಟ್ಯರಂಜನಿ ನೃತ್ಯ ಕಲಾ ಕೇಂದ್ರ 25 ವರ್ಷಗಳಿಂದ ನೃತ್ಯ ಕಲೆ ಉಳಿಸಿ ಬೆಳೆಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ನಾಟ್ಯರಂಜನಿ ನೃತ್ಯ ಕಲಾ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ತರಾಸು ರಂಗಮಂದಿರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಲಾ ಕೇಂದ್ರದ ರಜತ ಮಹೋತ್ಸವ ‘ನಾಟ್ಯರಂಜನಿ ನೃತ್ಯ ಹಬ್ಬ’ಉದ್ಘಾಟಿಸಿ ಮಾತನಾಡಿದರು.
ಸ್ಮಾರ್ಟ್‌ಫೋನ್, ಟಿವಿಯಂತಹ ದೃಶ್ಯ ಮಾಧ್ಯಮಗಳ ಹಾವಳಿಗಳ ನಡುವೆ ನಾಟ್ಯ ಮತ್ತಿತರ ಭಾರತೀಯ ಸಂಸ್ಕೃತಿಗೆ ಪೂರಕವಾಗಿರುವ ಕಲೆಗಳನ್ನು ರಕ್ಷಿಸಿದರೆ ಕಲಾವಿದರು ಉಳಿಯುತ್ತಾರೆ. ಸರ್ಕಾರಗಳು ಕಲೆ, ಕಲಾ ವಿದರಿಗೆ ಪ್ರೋತ್ಸಾಹ ನೀಡುತ್ತಿವೆ. ಕಲಾ ಕೇಂದ್ರಕ್ಕೆ ಅಗತ್ಯ ನಿವೇಶನ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್,ರಾಜ್ಯಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್.ಮಂಜುನಾಥ್,ಭಾರತ್ ಸ್ಕೌಟ್ಸ್ ಆ್ಯಂ ಡ್ ಗೈಡ್ಸ್ ಜಿಲ್ಲಾ ಆಯುಕ್ತೆ ಎಲ್.ಸವಿತಾ ಶಿವಕುಮಾರ್ ಮಾತನಾಡಿ,ಕಲಾ ಕೇಂದ್ರದ ಜಿ.ಕಿರಣ್ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್,ಕ್ರಿಯೇಟಿವ್ ಟಿ.ಎಂ.ವೀರೇಶ್,ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಇದ್ದರು.