ಕಲಾವಿದರಿಗೆ ಕರಗತವಾಗಲಿ ವೃತ್ತಿಪರತೆ

12
Published on

ಮೈಸೂರು: ಗ್ರಾಮಾಂತರ ಪ್ರದೇಶದ ಕಲಾವಿದರು ಪ್ರದರ್ಶನ ಕಲೆಯಲ್ಲಿ ವೃತ್ತಿಪರತೆ ಮೈಗೂಡಿಸಿಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕ ೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸುದರ್ಶನ್ ಹೇಳಿದರು.


ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹಾಗೂ ಚಂದ್ರು ಗ್ರಾಮೀಣ ಸಂಗೀತ ಕಲಾ ಸಂಘದ ಸಹಯೋಗದಲ್ಲಿ ನಗರದ ಕಿರುರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ 5 ತಿಂಗಳ ಸುಗಮ ಸಂಗೀತ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ನಾಟಕ, ನೃತ್ಯ, ಜಾನಪದ ಸೇರಿದಂತೆ ವಿವಿಧ ಪ್ರದರ್ಶನ ಕಲೆಯನ್ನು ಗ್ರಾಮಾಂತರ ಪ್ರದೇಶದವರು ಹವ್ಯಾಸಕ್ಕಾಗಿ ಪ್ರದರ್ಶನ ಮಾಡುತ್ತಾರೆ. ಇದು ಕಲಾ ಪರಂಪರೆ ಮುಂದುವರಿಕೆಗೆ ಅನುಕೂಲವಾಗಲಿದೆ. ಇದರೊಂದಿಗೆ ಕಲಾ ಪ್ರದರ್ಶನದಲ್ಲೂ ವೃತ್ತಿಪರತೆ ಮೈಗೂಡಿಸಿಕೊಳ್ಳಬೇಕು ಎಂದರು.


ನಗರ ಪ್ರದೇಶದಲ್ಲಿ ಪ್ರದರ್ಶನ ಕಲೆ ಪ್ರವೃತ್ತಿಯೊಂದಿಗೆ ವೃತ್ತಿಯೂ ಆಗಿದೆ. ಅದೇ ರೀತಿ ಗ್ರಾಮಾಂತರ ಪ್ರದೇಶದವರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಕಲೆಯನ್ನು ಮೈಗೂಡಿಸಿಕೊಂಡು ಸಾಧನೆ ವಾಡಬೇಕು ಎಂದರು.


ಕರ್ನಾಟಕ ಶಾಸ್ತ್ರಿಯ ಸಂಗೀತ ವಿಭಾಗದ ಉಪನ್ಯಾಸಕಿ ಎಂ.ಟಿ. ಶ್ರುತಿ ರಂಜನಿ ವಾತನಾಡಿ, ಗುರುಶಿಷ್ಯ ಎಂಬ ಪರಂಪರೆ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಡಾ.ಬಾಬು ಜಗಜೀವನರಾಮ್ ಸಂಶೋಧನಾ ಕೇಂದ್ರದ ಅಧಿಕಾರಿ ಡಾ.ಎಂ. ಶ್ರೀನಿವಾಸಮೂರ್ತಿ, ಶಿಕ್ಷಣ ಇಲಾಖೆ ನಿವೃತ್ತ ಉದ್ಯೋಗಿ ಶಿವರಾಜು, ಸುಗಮ ಸಂಗೀತ ಕಲಾವಿದ ನಂಜುಂಡಸ್ವಾಮಿ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net