ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ

bkt-6-2
Published on

ಬಾಗಲಕೋಟೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲೆಯ ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಭೀಕ್ಷುಕರಂತೆ ಕಾಣುತ್ತಿದೆ. ಇದರಿಂದ ಕಲಾವಿದರು ರೋಸಿ ಹೋಗಿದ್ದಾರೆ ಎಂದು ಕಲಾವಿದ ರಾಮಪ್ಪ ದಳವಾಯಿ ಗಂಭೀರವಾಗಿ ಆರೋಪಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರಿಗೆ ಮೀಸಲಿದ್ದರೂ ಬಾಗಲಕೋಟೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೋದರೆ ಕಲಾವಿದರಿಗೆ ಗೌರವ ಇಲ್ಲದಂತಾಗಿದೆ. ಅಽಕಾರಿ ಕರ್ಣಕುಮಾರ ಜೈನಾಪುರ ಅವರನ್ನು ಜಿಲ್ಲೆಯಿಂದ ಬಿಡುಗಡೆ ಮಾಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಕಲೆಯ ಬಗ್ಗೆಯೂ ಸಾಮಾನ್ಯ ಜ್ಞಾನ ಇಲ್ಲ. ಗ್ರಾಮೀಣ ಕಲಾವಿದರನ್ನು ಗುರುತಿಸುವ ಕಾರ್ಯ ಕೂಡ ಅವರಿಂದ ಆಗುತ್ತಿಲ್ಲ. ಇನ್ನೂ ಅನಕ್ಷರಸ್ಥ ಕಲಾವಿದರ ಅರ್ಜಿಯನ್ನು ಭರ್ತಿ ಮಾಡಿಕೊಂಡು ಹೋದರೆ ಎಲ್ಲರನ್ನು ಏಜೆಂಟರ ರೀತಿ ನೋಡುತ್ತಾರೆ. ಇನ್ನೂ ಕಲಾವಿದರನ್ನು ಮಾತ್ರ ಗೌರವದಿಂದ ನಡೆಸಿಕೊಳ್ಳುವುದಿಲ್ಲ ಎಂದು ದೂರಿದರು.

ಕಲಾವಿದ ಚಂದ್ರಶೇಖರ ಕಲಾದಗಿ ಮಾತನಾಡಿ, ಕರ್ಣಕುಮಾರ ಜೈನಾಪುರ ಸಂಗೀತ ಕಲಾವಿದರನ್ನು ಗುರುತಿಸಿ ಬೆಳಕಿಗೆ ತರುವ ಕೆಲಸ ಮಾಡುತ್ತಿಲ್ಲ. ಪ್ರತಿಯೊಬ್ಬ ಕಲಾವಿದರನ್ನು ಏಜೆಂಟರAತೆ ಕಾಣುವ ಇವರು ಕಲಾವಿದರನ್ನು ಹೇಗೆ ಗುರುತಿಸಲು ಸಾಧ್ಯ ಎಂದರು.

ಕಲಾವಿದ ರಾಘವೇಂದ್ರ ಕಟ್ಟಿ ಮಾತನಾಡಿ, ಕಲಾವಿದರು ಸಾಕಷ್ಟು ಜನರು ಇದ್ದರೂ ಸಮಾನಾಗಿ ಎಲ್ಲರಿಗೂ ಕಾರ್ಯಕ್ರಮ ನಡೆಸಲು ಸಂಗೀತ ಕಲಾವಿದರಿಗೆ ಅವಕಾಶ ಸಿಗುತ್ತಿಲ್ಲ. ಕಲಾವಿದರು ಎಂದರೆ ಅಽಕಾರಿಗೆ ಬಹಳ ನಿರ್ಲಕ್ಷ್ಯವಿದೆ ಎಂದು ಹೇಳಿದರು.

ಕಲಾವಿದ ಸಂತೋಷ ಗದ್ದನಕೇರಿ ಮಾತನಾಡಿ, ಜಿಲ್ಲೆಯಲ್ಲಿ ರನ್ನ ಉತ್ಸವ, ಕೂಡಸಂಗಮದಲ್ಲಿ ನಡೆದ ಬಸವಾದಿ ಶರಣರ ವೈಭವ ಕಾರ್ಯಕ್ರಮಕ್ಕೆ ಜಿಲ್ಲೆಯ ಕಲಾವಿದರನ್ನು ನಿರ್ಲಕ್ಷಿಸಿ ಬೇರೆ ಜಿಲ್ಲೆಯಿಂದ ಕಲಾವಿದರನ್ನು ಕರೆತಂದು ಕಾರ್ಯಕ್ರಮ ನೀಡಲಾಗಿದೆ ಎಂದು ದೂರಿದರು.

ಕಲಾವಿದರಾದ ತಿಪ್ಪವ್ವ ಮಾದರ, ಕಲಾವಿದ ಹಣಮಂತ ಮೇತ್ರಿ, ಚಂದ್ರಶೇಖರ ಛಲವಾದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net