ಕಲಾವಿದರ ಸಂಕಷ್ಟ ಆಲಿಸಿ

bkt-26-9
ಬಾಗಲಕೋಟೆ ಜಿಲ್ಲೆಯ ಜಾನಪದ, ರಂಗಭೂಮಿ ಕಲಾವಿದರು ಜಿಲ್ಲಾಡಳಿತ ಭವನ ಎದುರು ಸೋಮವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಽಕಾರಿ ಅಶೋಕ ತೇಲಿ ಅವರಿಗೆ ಮನವಿ ಸಲ್ಲಿಸಿದರು
Published on

ಬಾಗಲಕೋಟೆ: ಸಂಕಷ್ಟದಲ್ಲಿರುವ ಕಲಾವಿದರ ನೆರವಿಗೆ ಸರ್ಕಾರ ಧಾವಿಸಬೇಕು ಹಾಗೂ ಮಾಶಾಸನಕ್ಕೆ ವಯೋಮಿತಿ ೫೦ ಕ್ಕೆ ಇಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಜಾನಪದ, ರಂಗಭೂಮಿ ಕಲಾವಿದರು ಜಿಲ್ಲಾಡಳಿತ ಭವನ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಕಲಾವಿದರು ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಅಪರ ಜಿಲ್ಲಾಽಕಾರಿ ಅಶೋಕ ತೇಲಿ ಅವರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಸರ್ಕಾರದ ಯೋಜನೆಗಳು ಕಲಾವಿದರಿಗೆ ತಲುಪುತ್ತಿಲ್ಲ. ಈಗಾಗಲೇ ಸಾಕಷ್ಟು ನೋವು, ಸಂಕಟದಲ್ಲಿರುವ ಕಲಾವಿದರಿಗೆ ನೊರೆಂಟು ಸವಾಲುಗಳಲ್ಲಿ ಬದುಕುತ್ತಿರುವ ಕಲಾವಿದವರಿಗೆ ಸಮರ್ಪಕ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ವಿ-Àಲವಾಗುತ್ತಿದೆ. ಹೇಳುವದಕ್ಕೆ ಕಲೆ, ಸಂಸ್ಕೃತಿ ನಾಡು ಆಗಿದೆ. ಆದರೇ ಕಲಾವಿದರಿಗೆ ಬೆಲೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಲಾವಿದರ ಮಾಶಾಸನ ೫ ಸಾವಿರಕ್ಕೆ ಹೆಚ್ಚಿಸಬೇಕು, ಕಲಾವಿದರ ಕುಟುಂಬದ ವೈದ್ಯಕೀಯ ವೆಚ್ಚ ಸರ್ಕಾರವೇ ಭರಿಸಬೇಕು, ಎಲ್ಲ ಕಲಾವಿದರಿಗೆ ಸರ್ಕಾರ ಗುರುತಿನ ಚೀಟಿ ನೀಡಬೇಕು, ಪ್ರತಿ ಮಾರ್ಚ ಒಳಗಾಗಿ ಮಾಶಾಸನ ಮಂಜೂರು ಮಾಡಬೇಕು, ಎಲ್ಲ ಇಲಾಖೆಯಲ್ಲಿ ಕಲಾವಿದರನ್ನು ಸಮಾನವಾಗಿ ಕಾಣಬೇಕು, ಒಂದು ನಾಟಕ ಪ್ರದರ್ಶನಕ್ಕೆ ೮೦ ಸಾವಿರಕ್ಕೆ ಹೆಚ್ಚಿಸಬೇಕು, ಅಕಾಲಿಕ ಮರಣ, ಅವಘಡದಿಂದ ಮೃತಪಟ್ಟ ಕಲಾವಿದರಿಗೆ ೧೦ ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ನಿಜಗುಣ ಶಿವಯೋಗಿಗಳ ಜಯಂತಿ ಸರ್ಕಾರವೇ ಆಚರಿಸಬೇಕು, ಕಲಾವಿದರಿಗೆ ಬಡ್ಡಿ ರಹಿತ ಸಾಲ ನೀಡಬೇಕು, ಕಲಾವಿದರ ಮಕ್ಕಳಿಗೆ ಸರ್ಕಾರ ಮೀಸಲಾತಿ ಕಲ್ಪಿಸಬೇಕು, ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಕಲಾವಿದರ ನೋಂದಣಿ ಮಾಡಬೇಕು, ಜನಪದ ಸಂಸ್ಕೃತಿ ಉಳಿವಿಗಾಗಿ ಸರ್ಕಾರ ಯುವ ಸಮೂಹಕ್ಕೆ ಶಿಬಿರ ಆಯೋಜಿಸಬೇಕು, ಜಿಲ್ಲಾಡಳಿತದಿಂದ ಹಮ್ಮಿಕೊಂಡಿರುವ ಸಾಂಸ್ಕೃತಿ ಕಾರ್ಯಕ್ರಮಗಳ ಪೂರ್ವ ಭಾವಿಸಭೆ ಕಲಾವಿದರನ್ನು ಆಹ್ವಾನಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಮುಖಂಡರಾದ ಶರಣಬಸವ ಶಾಸಿöಗಳು, ಪವಿತ್ರ ಜಕ್ಕಪ್ಪನವರ, ಶಂಕ್ರಮ್ಮ ಹಂಚಿನಾಳ, ಈರಣ್ಣ ಮನಗೂಳಿ, ಶ್ರೀಶೈಲ ಹೂಗಾರ, ಈರವ್ವ ಅಂಗಡಿ, ತಿಪ್ಪಣ್ಣ ಬಾರಕೇರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net