

ಕಲಾದಗಿ: ಶಾಂತಿ-ಸುವ್ಯವಸ್ಥೆ ಹದಗೆಡದಂತೆ ಮೊಹರಂ ಹಬ್ಬವನ್ನು ಸೌಹಾರ್ದದಿಂದ ಆಚರಿಸುವ ಮೂಲಕ ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಬಾಗಲಕೋಟೆ ಗ್ರಾಮೀಣ ಸಿಪಿಐ ಬಿ.ಎನ್. ಸೋರಿ ಮನವಿ ಮಾಡಿದರು
ಮೊಹರಂ ಹಬ್ಬದ ನಿಮಿತ್ತ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಮದ ಮುಖಂಡರ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ಸೌಹಾರ್ದ ವಾತಾವರಣ ಇದೆ. ಎಲ್ಲ ಧರ್ಮಿಯರಲ್ಲಿ ಇದೇ ಸಹೋದರತ್ವ ಇರಲಿ ಎಂದರು
ಮುಖಂಡರಾದ ಜೆ.ಡಿ. ಚೌದರಿ, ಡಿ.ಡಿ. ದುರ್ವೆ ಮಾತನಾಡಿ, ಗ್ರಾಮದವರು ಹಿಂದೆಯೂ ಒಂದಾಗಿದ್ದೇವು, ಮುಂದೇವೂ ಒಂದಾಗಿಯೇ ಇರುತ್ತೇವೆ ಎಂದು ಭರವಸೆ ನೀಡಿದರು
ಪಿಎಸ್‌ಐ ರಾಮನಗೌಡ ಸಂಕನಾಳ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಜಮೀರಹ್ಮದ್ ಜಮಾದಾರ, ಸದಸ್ಯರಾದ ಫಕೀರಪ್ಪ ಮಾದರ, ಶ್ಯಾಮ ಕಾಳೆ, ಅಬ್ದುಲಖಾನ್ ಪಠಾಣ, ಎಂ.ಎ. ತೇಲಿ, ಮುಖಂಡರಾದ ಬಂದೇನವಾಜ್ ಸೌದಾಗರ, ಹಸನ್ಮಹದ ರೋಣ, ರಾಜಾಸಾಹೇಬ ಗೋಠೆ, ಅಖ್ತರ್ ರೋಣ, ಪರುಶುರಾಮ ಪರೀಟ್ ಇತರರಿದ್ದರು.