ಕಲಾಡ್ಚ ವಾರ್ಷಿಕೋತ್ಸವ ಸಂಪನ್ನ

7.npk..1
Published on

ನಾಪೋಕ್ಲು: ಸಮೀಪದ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಕುಂಬ್ಯಾರು ಕಲಾಡ್ಚ ವಾರ್ಷಿಕೋತ್ಸವ ವಿಜೃಂಭಣೆಯಿಂದ ಜರುಗಿತು.


ಉತ್ಸವದ ಅಂಗವಾಗಿ ವಿಶೇಷ ಪೂಜೆಗಳು ನೆರವೇರಿದವು. ದೇವಾಲಯದಲ್ಲಿ ತುಲಾಭಾರ ಸೇವೆ ಬಳಿಕ ಭಕ್ತರು ವಿವಿಧ ರೀತಿಯ ಹರಕೆ ಸಲ್ಲಿಸಿದರು. ದೇವಾಲಯದಲ್ಲಿ ತುಲಾಭಾರ ಸೇವೆಗಳು, ಕಾಫಿ ಕಾಳುಮೆಣಸು, ಎಣ್ಣೆ, ಮತ್ತಿತರ ಹರಕೆ ಸಲ್ಲಿಸಿದರು. ನಂತರ ದೇವಾಲಯದಲ್ಲಿ ಮಹಾಪೂಜೆ, ಎತ್ತುಪೋರಾಟ ಜರುಗಿ ಭಕ್ತರಿಗೆ ಅನ್ನಸಂತರ್ಪಣೆ, ಬಳಿಕ ದೇವರ ನೃತ್ಯಬಲಿ ನೆರವೇರಿತು.

ತಂತ್ರಿ ಸಂತೋಷ್ ಹೆಬ್ಬಾರ್, ಅರ್ಚಕರಾದ ಸುರೇಶ್ ಶರ್ಮ, ರಮೇಶ್ ಶರ್ಮ ಹಾಗೂ ಸುಧೀರ್ ಪೂಜಾ ವಿಧಿ-ವಿಧಾನ ನೆರವೇರಿಸಿದರು. ಆನಂತರ ಇಗ್ಗುತ್ತಪ್ಪ ದೇವರ ಆದಿ ಸ್ಥಳವಾದ ಮಲ್ಮ ಬೆಟ್ಟಕ್ಕೆ ಎತ್ತುಪೋರಾಟದೊಂದಿಗೆ ತೆರಳಿ ವಿವಿಧ ಪೂಜಾ ವಿಧಿ -ಧಾನಗಳನ್ನು ನೆರವೇರಿಸಲಾಯಿತು.

ಉತ್ಸವದಲ್ಲಿ ತಕ್ಕ ಮುಖ್ಯಸ್ಥರಾದ ನಾಪನೆರವಂಡ ಪೊನ್ನಪ್ಪ, ಬಾಳೆಯಡ ರಾಜ ಕುಂಞಪ್ಪ, ಬದಂಚೆಟ್ಟೀರ ನಾಣಯ್ಯ, ಕಯ್ಯಂದಿರ ರಮೇಶ್, ಆಡಳಿತ ಮಡಳಿ ಅಧ್ಯಕ್ಷ ಮುಂಡಂಡ ನಾಣಯ್ಯ, ಕಾರ್ಯದರ್ಶಿ ಮುಕ್ಕಾಟಿರ ವಿನಯ್, ಆಡಳಿತ ಮಡಳಿ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net