ಕಲಾ ಮನಸುಗಳಿಗೆ ಸಂಘಟನೆ ಅಗತ್ಯ

Sammelana
Published on

ಚಿತ್ರದುರ್ಗ: ಕಲಾ ಮನಸುಗಳು ಕಳ್ಳುಬಳ್ಳಿಯಂತೆ ಬೆಳೆದು ಸಂಘಟನಾತ್ಮಕವಾಗಿ ತೊಡಗಿಸಿಕೊಳ್ಳಬೇಕು ಎಂದು ಜಾನಪದ ಗಾಯಕ ಮೋಹನ್‌ಕುಮಾರ್ ಸಲಹೆ ನೀಡಿದರು.

ತನುಶ್ರೀ ಪ್ರಕಾಶನ ಹಾಗೂ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ಭಾನುವಾರ ಪತ್ರಿಕಾ ಭವನದಲ್ಲಿ ನಡೆದ ದ್ವಿತೀಯ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ನಮ್ಮ ಮಧ್ಯೆ ಪ್ರತಿಭಾವಂತರು ಅನೇಕರಿದ್ದಾರೆ. ಸೂಕ್ತ ವೇದಿಕೆ ಸಿಗದೆ ಅವಕಾಶದಿಂದ ವಂಚಿತರಾಗಿದ್ದಾರೆ. ಅಂತವರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸಕ್ಕೆ ಪ್ರಕಾಶನ ಮುಂದಾಗಿದೆ. ಇದು ಇತರರಿಗೂ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಪದ್ಮಣ್ಣ ಗಿಡ್ಡಪ್ಪನವರ್ ರಚಿಸಿದ ಕಾವ್ಯ ವೃಕ್ಷಾಂಗನೆ, ಕಾವ್ಯಾಂತರಂಗ, ಬಸವರಾಜ್ ಕರುವಿನ ಬರೆದ ಕಣ್ಣೊಳಗಿನ ಕವಲುಗಳು ಎಂಬ ಕೃತಿಗಳು ಬಿಡುಗಡೆಯಾದವು.

ಮೊರಾರ್ಜಿ ದೇಸಾಯಿ ಶಾಲೆ ಪ್ರಾಚಾರ್ಯೆ ಅನುಸೂಯ, ಸಾಮಾಜಿಕ ಕಾರ್ಯಕರ್ತೆ ಪುಷ್ಪಾ ಚಂದ್ರಶೇಖರ್, ವೇದಿಕೆ ರಾಜ್ಯ ಅಧ್ಯಕ್ಷ ರಾಜು, ಕಾರ್ಯಾಧ್ಯಕ್ಷ ಚಿದಾನಂದಮೂರ್ತಿ, ತಿರುಮಲ, ಚಿನ್ಮಯ್, ನೇತ್ರಾವತಿ ನೆಲ್ಲಿಕಟ್ಟೆ, ಸರಸ್ವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net