

ಚಿತ್ರದುರ್ಗ: ನಗರದಲ್ಲಿ ಕಲಾ ಗ್ಯಾಲರಿ ಸ್ಥಾಪನೆಗೆ ಒತ್ತಾಯಿಸಿ ಚಿತ್ರ ಕಲಾವಿದರು ಮತ್ತು ಕಲಾಭಿಮಾನಿಗಳು ಶುಕ್ರವಾರ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರಿಗೆ ಮನವಿ ಸಲ್ಲಿಸಿದರು.
ಪುಷ್ಕರಣಿಗಳು,ನೀರಿನ ಹೊಂಡಗಳು,ಗಿರಿಧಾಮ,ಕೋಟೆ ಕೊತ್ತಲಗಳಿಂದ ಕಂಗೊಳಿಸುತ್ತಾ,ಚಿತ್ರಗಳು,ಕಲಾರಸಿಕರನ್ನು ಸದಾ ಸೆಳೆಯುತ್ತಿರುವ ಇತಿಹಾಸ ಪ್ರಸಿದ್ಧ ಚಿತ್ರದುರ್ಗ ಜಿಲ್ಲೆಯಲ್ಲಿ ಕಲೆಯನ್ನು ಜೀವಂತವಾಗಿರಿಸ ಬೇಕಾಗಿದೆ. ಆದ್ದರಿಂದ ನಗರದಲ್ಲಿ ಆರ್ಟ್ ಗ್ಯಾಲರಿ ಸ್ಥಾ ಪನೆಯ ಅಗತ್ಯವಿದೆ.
ಇದರಿಂದಾಗಿ ಅಪೂರ್ವ,ಅಮೂಲ್ಯ ಚಿತ್ರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಹಾಗೂ ಸಂರಕ್ಷಿಸಲು ಅನುಕೂಲವಾಗಲಿದೆ. ಪ್ರ ಸ್ತುತ ಗ್ಯಾಲರಿ ಇಲ್ಲದೆ ಇರುವುದರಿಂದಾಗಿ ಜಿಲ್ಲೆಯ ಕಲಾವಿದರಿಂದ ರೂಪುಗೊಂಡ ಕಲೆ ಮತ್ತು ಚಿತ್ರಗಳು ಕಾಲಗರ್ಭದಲ್ಲಿ ಗೆದ್ದಲು ಹಿಡಿ ಯುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ,ನಗರದಲ್ಲಿ ಸೂಕ್ತ ಸ್ಥಳಾವಕಾಶ ಗುರುತಿಸಿ ಕಲಾಗ್ಯಾಲರಿ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿ ದರು. ಕ್ರಿಯೇಟಿವ್‌ವೀರೇಶ್,ನಾಗು ಆರ್ಟ್ಸ್ ನಾಗರಾಜ್,ಸಾಹಿತಿ ಡಾ.ಲೋಕೇಶ್‌ಅಗಸನಕಟ್ಟೆ,ನಿವೃತ್ತ ಪ್ರಾಚಾರ‌್ಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್,ಕಲಾಲೋಕದ ಡಿ.ಟಿ.ರಮೇಶ್,ಕೆ.ರಾಘವೇಂದ್ರ,ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ,ಗಾಯತ್ರಿಶಿವರಾಂ,ಶಿವರಾಂ,ಮೃತ್ಯುಂ ಜಯಪ್ಪ,ಆರ್.ವೆಂಕಟೇಶರೆಡ್ಡಿ,ಸಿದ್ದಾಪುರಶಿವಕುಮಾರ್,ಟಿ.ತಿಮ್ಮಾರೆಡ್ಡಿ,ಒ.ಅಂಜಿನಪ್ಪ ಹೊಸರಂಗಾಪುರ,ಜಿ.ಆರ್.ಪಾ ಪಯ್ಯ,ದಾದು, ಕೆ.ಜಿ.ಮಲ್ಲಿಕಾರ್ಜುನ್,ಬಿ.ಮಾರುತಿ,ಕಿರಣ್ ಮತ್ತಿತರರು ಇದ್ದರು.
(ಸಿಟಿಡಿ 28 ಆರ್ಟ್ ಮನವಿ)
ಚಿತ್ರದುರ್ಗದಲ್ಲಿ ಕಲಾ ಗ್ಯಾಲರಿ ಸ್ಥಾಪನೆಗೆ ಆಗ್ರಹಿಸಿ ಚಿತ್ರಕಲಾವಿದರು ಮತ್ತು ಕಲಾಭಿಮಾನಿಗಳು ಶುಕ್ರವಾರ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರಿಗೆ ಮನವಿ ಸಲ್ಲಿಸಿದರು. ಕ್ರಿಯೇಟಿವ್‌ವೀರೇಶ್,ನಾಗರಾಜ್,ಡಾ.ಲೋಕೇಶ್‌ಅಗಸನಕಟ್ಟೆ,ಡಾ.ಸಂಗೇನಹಳ್ಳಿಅಶೋಕ್ ಕುಮಾರ್,ಗಾಯತ್ರಿಶಿವರಾಂ,ಡಿ.ಟಿ.ರಮೇಶ್,ಕೆ.ರಾಘವೇಂದ್ರ,ಕೆ.ಪಿ.ಎಂ.ಗಣೇಶಯ್ಯ ಮತ್ತಿತರರು ಇದ್ದರು.