ಮೈಸೂರು: ಪಿಟೀಲು ಟಿ. ಚೌಡಯ್ಯ ಕುರಿತ 32 ಕೃತಿಗಳ ‘ಕಲಾ ಕೌಸ್ತುಭ’ ಆಂಗ್ಲ ಭಾಷಾ ಪುಸ್ತಕ ಫೆ.26ರಂದು ನಗರದಲ್ಲಿ ಬಿಡುಗಡೆಗೊಳ್ಳಲಿದೆ.
ಕೃಷ್ಣಮೂರ್ತಿಪುರಂನಲ್ಲಿರುವ ನಿತ್ಯೋತ್ಸವ ಕನ್ವೆನ್ಷನ್ ಸೆಂಟರ್‌ನಲ್ಲಿ ಅಂದು ಬೆಳಗ್ಗೆ 11ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಚಿತ್ರವೀಣಾ ಎನ್.ರವಿಶಂಕರ್ ಅವರು ಕೃತಿ ಬಿಡುಗಡೆ ಮಾಡಲಿದ್ದು, ಸಂಗೀತ ವಿದ್ವಾನ್ ಎ.ವಿ.ಆನಂದ್ ಅಧ್ಯಕ್ಷತೆ ವಹಿಸಲಿದ್ದಾರೆ. ಚೌಡಯ್ಯ ಅವರ ಹಿರಿಯ ಶಿಷ್ಯೆ ಡಾ.ಅನಸೂಯಾ ಕುಲಕರ್ಣಿ ಅವರು ಕೃತಿ ಪರಿಚಯ ಮಾಡಲಿದ್ದಾರೆ ಎಂದು ಕೃತಿಯ ಲೇಖಕಿ ಡಾ.ಪದ್ಮಾವತಿ ನರಸಿಂಹನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನನ್ನ ಪಿಎಚ್.ಡಿ ವಿಷಯವಾದ ‘ಕರ್ನಾಟಕ ಸಂಗೀತಕ್ಕೆ ಮೈಸೂರು ಪಿಟೀಲು ಟಿ.ಚೌಡಯ್ಯಅವರ ಕೊಡುಗೆ-ಟಿ.ಚೌಡಯ್ಯನವರ ಜೀವನಧಾರಿತ ಸ್ವಾರಸ್ಯ ಪ್ರಸಂಗಗಳು’ ಅನ್ನೇ ಕೃತಿಯನ್ನಾಗಿಸಲಾಗಿದೆ. ಕಾರ್ಯಕ್ರಮಕ್ಕೂ ಮುನ್ನ ವಿದುಷಿ ಜ್ಯೋತ್ಸ್ನಾಮಂಜುನಾಥ್ ಅವರಿಂದ ಟಿ.ಚೌಡಯ್ಯ ಅವರ ಕೃತಿಗಳನ್ನು ಆಧರಿಸಿ ಏಳು ತಂತಿ ಪಿಟೀಲು ವಾದನ ಆಯೋಜಿಸಲಾಗಿದೆ ಎಂದು ಹೇಳಿದರು.
ಸಾಹಿತಿ ಕೃ.ರಾಮಚಂದ್ರ, ಧೀಮಂತ ಇದ್ದರು.