ಕಲಬೆರೆಕೆ ಆಹಾರ ವಿರುದ್ಧ ಕ್ರಮ

dc meeting
Published on

ಬೀದರ್: ಈಟ್ ರೈಟ್ ಚ್ಯಾಲೇಂಜ್ ಬಗ್ಗೆ ಜನರಲ್ಲಿ ಅರಿವು ಮೂಡಬೇಕು. ಒಳ್ಳೆಯ ಗುಣಮಟ್ಟದ ಆಹಾರ ಸೇವಿಸಿ ಪ್ರತಿಯೊಬ್ಬರೂ ತಮ್ಮ ಆರೋಗ್ಯ ಉತ್ತಮವಾಗಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹೇಳಿದರು.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ವತಿಯಿಂದ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ ಈಟ್ ರೈಟ್ ಚ್ಯಾಲೇಂಜ್ ಉದ್ಘಾಟನೆ ಹಾಗೂ ಜಿಲ್ಲಾ ಮಟ್ಟದ ಸಂಚಾಲನಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ ಅನುಸಾರ ನೀಡಿರುವ ಸಲಹೆ ಸೂಚನೆ ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಬೀದಿ ಬದಿ ವ್ಯಾಪಾರಿಗಳು, ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ ಗಳು ಆಹಾರ ಪದಾರ್ಥ ತಯಾರಿಸುವುದರಲ್ಲಿ ಯಾವುದೇ ತರಹದ ಕಳಪೆ ಗುಣಮಟ್ಟದ ಆರೋಗ್ಯಕ್ಕೆ ಹಾನಿಕರ ಆಗುವಂಥ ವಸ್ತು, ದ್ರವ ಸೇರಿಸಬಾರದು ಎಂದು ಸೂಚಿಸಿದರು.

ಎಸ್ಪಿ ನಾಗೇಶ ಮಾತನಾಡಿ, ಕಲಬೇರೆಕೆ ಆಹಾರ ತಯಾರಿಕೆ ಮಾಡುವರ ಬಗ್ಗೆ ಮಾಹಿತಿ ನೀಡಿದಲ್ಲಿ ಅವರ ವಿರುದ್ಧ ಪೊಲೀಸ್ ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಡಾ. ಸಂತೋಷ ಕಾಳೆ ಮಾತನಾಡಿದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ವಿ.ಜಿ.ರೆಡ್ಡಿ, ಡಿಡಿಪಿಐ ಗಂಗಣ್ಣಾ ಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ತಿಪ್ಪಣ್ಣ ಸಿರಸಿಗೆ, ಜಿಲ್ಲಾ ಕೈಗಾರಿಕಾ ಅಧಿಕಾರಿ ಸುರೇಖಾ ಮುನೋಳಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ ಬಿ.ಬಾಬುರೆಡ್ಡಿ, ಪ್ರಮುಖರಾದ ಅರವಿಂದಕುಮಾರ, ಸತೀಶ್ ಕಾಂಬ್ಳೆ, ಪ್ರಕಾಶ, ದಯಾನಂದ ಶೆಟ್ಟಿ, ಉದಯ ಶೆಟ್ಟಿ, ಸುನೀತಾ ಪಾಟೀಲ್, ವಿನೋದಕುಮಾರ, ಕಿಶನ್ ರಾಠೋಡ್, ಪ್ರಕಾಶ, ಮಾರುತಿ, ವಾಜೀದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net