

ಕಲಬುರಗಿ: ಜಿಲ್ಲೆಯಲ್ಲಿ ಅಧಿಕಾರಿಗಳು ತಮ್ಮ ಮನಸ್ಸಿಗೆ ತೋಚಿದಂತೆ ವರ್ತಿಸುತ್ತಿದ್ದಾರೆ. ಕೆಲವರಿಗೆ ಕೊಬ್ಬು ಹೆಚ್ಚಾಗಿದ್ದು, ಇಳಿಸುತ್ತೇನೆ ಎಂದು ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ್ ಕಿಡಿ ಕಾರಿದರು.
ನಗರ ಸೇರಿ ಜಿಲ್ಲಾದ್ಯಂತ ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಅಧಿಕಾರಿಗಳಿಗೆ ಜವಾಬ್ದಾರಿಯೇ ಇಲ್ಲ. ನಗರದಲ್ಲಿನ ಜನರಿಗೆ ಒಳ್ಳೆಯದು ಮಾಡಲು ಅಂತಹ ಅಧಿಕಾರಿಗಳನ್ನು ಕಿತ್ತು ಹಾಕಬೇಕಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಾನಗರ ಪಾಲಿಕೆಯಲ್ಲಿ ಆರ್.ಪಿ.ಜಾಧವ್ ಕಳೆದ ೨೦ ವರ್ಷದಿಂದ ಅಧಿಕಾರಿಯಾಗಿದ್ದು, ಮೇಯರ್ ಯಲ್ಲಪ್ಪ ನಾಯ್ಕೋಡಿ ಮುಖ್ಯಮಂತ್ರಿಗೆ ಪತ್ರ ಬರೆದು, ಅಮಾನತಿಗೆ ಕೋರಿದ್ದಾರೆ. ಇಂತಹ ಅಧಿಕಾರಿ ನಗರದಲ್ಲಿ ಯಾಕಿರಬೇಕು? ಖೊಟ್ಟಿ ಬಿಲ್‌ಗಳ ಸೃಷ್ಟಿಸಿ, ಅವ್ಯವಹಾರ ಮಾಡಿದ್ದಾನೆ ಎಂದು ಆರೋಪಿಸಿದರು.
ನಗರದ ಅಕ್ಕ ಮಹಾದೇವಿ ಕಾಲನಿಯಲ್ಲಿನ ರಸ್ತೆ ಬದಿ ಮುರುಮ್ ಹಾಕಿದ್ದು, ಚರಂಡಿಯಲ್ಲಿ ಬಿದ್ದು ಬ್ಲಾಕ್ ಆಗಿತ್ತು. ಈ ಬಗ್ಗೆ ಗುತ್ತಿಗೆದಾರರಿಗೆ ಬಿಲ್ ಪಾವತಿಸಬೇಡಿ ಎಂದು ಜಾಧವ್‌ಗೆ ಹೇಳಿದ್ದೆ. ಆದರೆ ಜಾಧವ್ ಬಿಲ್ ಪಾಸ್ ಮಾಡಿದ್ದ. ಇಂತಹ ಅಧಿಕಾರಿ ೨೦ ವರ್ಷದಿಂದ ಇಲ್ಲೇ ಇದ್ದಾನೆ. ಇನ್ನು ಪಾಲಿಕೆ ಆಯುಕ್ತರನ್ನು ವರ್ಗಾವಣೆ ಮಾಡಿ, ವಾಪಸ್ ಪಡೆದಿದ್ದು ಯಾಕೆ ಎಂಬುದು ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಂದಾಲೋಚನೆ ಇಲ್ಲ: ಪಾಲಿಕೆ ವ್ಯಾಪ್ತಿಯಲ್ಲಿ ಆರು ದಿನಕ್ಕೊಮ್ಮೆ ನೀರು ಬಿಡುತ್ತಿದ್ದಾರೆ. ಎಲ್ ಆ್ಯಂಡಿ ಟಿ ಕಾಮಗಾರಿ ಮೇಲ್ವಿಚಾರಣೆ ಮಾಡುವ ಆರ್.ಪಿ.ಜಾಧವ್ ನಿರ್ಲಕ್ಷÈ ವಹಿಸಿದ್ದಾನೆ. ಎಲ್ಲಿಂದ ನೀರು ತರಬೇಕು ಎಂಬ ಯೋಜನೆ ಇಲ್ಲ. ಭೀಮಾ, ಬೆಣ್ಣೆತೋರಾ ಯೋಜನೆಯಿಂದಲೂ ಆಗುತ್ತಿಲ್ಲ. ಆದ್ದರಿಂದ ಜೇವರ್ಗಿ ಬಳಿ ಯುಕೆಪಿಯ ಜೇವರ್ಗಿ ಕ್ಯಾನಲ್‌ಗೆ ಬ್ಯಾರೇಜ್ ನಿರ್ಮಿಸಿದರೆ, ಪರಿಹಾರ ದೊರೆಯುತ್ತದೆ ಎಂದರು.
ಬರೀ ಆರೋಪ ದಾಖಲೆ ಇಲ್ಲ: ಪಾಲಿಕೆ ಉಪ ಆಯುಕ್ತ ಆರ್.ಪಿ.ಜಾಧವ್ ಖೊಟ್ಟಿ ಬಿಲ್ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ ಬಿ.ಆರ್.ಪಾಟೀಲ್ ಯಾವುದೇ ದಾಖಲೆ ಬಿಡುಗಡೆ ಮಾಡಲಿಲ್ಲ. ಅವ್ಯವಹಾರ ಎಂದು ಆರೋಪಿಸಿದರು.