ಕಲಬುರಗಿಯಲ್ಲಿ ಹೂಡಿಕೆದಾರರ ಸಮಾವೇಶ

3108Klb21
Published on

ಕಲಬುರಗಿ: ಬಂಡವಾಳ ಹೂಡಿಕೆದಾರರ ಸಮಾವೇಶ ಮತ್ತು ರೋಡ್ ಶೋವನ್ನು ಕಲಬುರಗಿ ನಗರದಲ್ಲಿ ಶೀಘ್ರವೇ ಹಮ್ಮಿಕೊಳ್ಳುವ ಭರವಸೆಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಪ್ರಕಟಿಸಿದ್ದಾರೆ.
ಎಚ್ಕೆಸಿಸಿಐ ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸಹಯೋಗದಡಿ ಹೈಕ ವಾಣಿಜ್ಯೋದ್ಯಮಿಗಳ ಸಂಘ ಸೋಮವಾರ ಆಯೋಜಿಸಿದ್ದ ವಾಣಿಜ್ಯೋದ್ಯಮಿಗಳ ಜತೆ ಸಂವಾದದಲ್ಲಿ ಮಾತನಾಡಿದ ಅವರು,
ರಸ್ತೆ, ರೈಲು, ವಿಮಾನ ಸೇರಿ ಮೂಲಸೌಕರ್ಯ ಹೊಂದಿರುವ ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಿನ ಹೂಡಿಕೆಗೆ ಉದ್ಯಮಿಗಳನ್ನು ಆಕರ್ಷಿಸಲು ಸಹಕಾರಿಯಾಗಲಿದೆ ಎಂದರು.
ಸ್ಥಳೀಯರ ಜತೆ ಇತರ ಭಾಗದ ಉದ್ಯಮಿಗಳಿಗೆ ಇಲ್ಲಿ ಹೂಡಿಕೆ ಮಾಡಲು, ಸರ್ಕಾರ ಒದಗಿಸುತ್ತಿರುವ ಮೂಲಸೌಕರ್ಯ ಸೇವೆಗಳ ಕುರಿತು ಮನವೊಲಿಸಲು ಸಮಾವೇಶ ಮತ್ತು ರೋಡ್ ಶೋ ಸಹಕಾರಿಯಾಗಲಿದೆ ಎಂಬ ಉದ್ಯಮಿ ಸಂತೋಷ ಲಂಗರ ಸಲಹೆಗೆ ಸಚಿವರು ಸಕಾರಾತ್ಮಕ ಸ್ಪಂದಿಸಿದರು.
ಕೆಸರಟಗಿ ನಂದೂರ ಕೈಗಾರಿಕಾ ಪ್ರದೇಶದಲ್ಲಿ ನಿವೇಶನಗಳ ಲೀಜ್ ಅಗ್ರಿಮೆಂಟ್ ಮುಗಿದಿದ್ದರಿಂದ ಅದನ್ನು ಖರೀದಿ ದಾಖಲೆ ಮಾಡಿಕೊಡಲು ಕಡಿಮೆ ಹಣ ನಿಗದಿಪಡಿಸಲಾಗುವುದು. ಕೈಗಾರಿಕೆಗಳು ಕೇವಲ ಬೆಂಗಳೂರು ಕೇಂದ್ರೀಕೃತಗೊಳ್ಳದಂತೆ ಉಳಿದ ಕಡೆಗಳಿಗೂ ಬರುವಂತಾಗಬೇಕು. ಕಲ್ಯಾಣ ಕನರ್ಾಟಕದಲ್ಲಿ ಕೈಗಾರಿಕಾ ಕ್ರಾಂತಿ ಮಾಡಲು ಶ್ರಮಿಸುವುದಾಗಿ ತಿಳಿಸಿದರು.
ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಶಾಸಕರಾದ ಬಿ.ಜಿ.ಪಾಟೀಲ್, ರಾಜಕುಮಾರ ಪಾಟೀಲ್ ತೆಲ್ಕೂರ, ಬಸವರಾಜ ಮತ್ತಿಮೂಡ, ಸುಭಾಷ ಗುತ್ತೇದಾರ್, ಸುನೀಲ್ ವಲಾ್ಲೃಪುರೆ, ಮಾಜಿ ಎಂಎಲ್ಸಿ ಶಶೀಲ್ ನಮೋಶಿ, ಜಿಲ್ಲಾಧಿಕಾರಿ ವಸಿರೆಡ್ಡಿ ವಿಜಯಾ ಜ್ಯೋತ್ಸ್ನಾ, ಎಚ್ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ.ಪಾಟೀಲ್, ಉಪಾಧ್ಯಕ್ಷ ಶರಣು ಪಪ್ಪಾ, ಕಾರ್ಯದರ್ಶಿ ಶಶಿಕಾಂತ ಪಾಟೀಲ್, ಖಜಾಂಚಿ ರವಿಕುಮಾರ ಸರಸಂಬಿ, ಕಾಸಿಯಾ ಅಧ್ಯಕ್ಷ ಕೆ.ಬಿ. ಅರಸಪ್ಪ, ಕೆಐಎಡಿಬಿ ಸಿಇಒ ಡಾ.ಎನ್. ಶಿವಶಂಕರ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಾಣಿಕ ರಘೋಜಿ, ಉದ್ಯಮಿಗಳಾದ ಉಮಾಕಾಂತ ನಿಗ್ಗುಡಗಿ, ಶಿವಶರಣಪ್ಪ ನಿಗ್ಗುಡಗಿ, ಗೋಪಾಲ ಬುಚನಳ್ಳಿ, ಪ್ರಶಾಂತ ಮಾನಕರ್, ಭೀಮಾಶಂಕರ ಪಾಟೀಲ್, ಲಕ್ಷ್ಮಣ ದಸ್ತಿ, ಮನೀಷ್ ಜಾಜು, ಬಸವರಾಜ ಖಾನಾಪುರ, ಶಿವರಾಜ ಇಂಗಿನಶೆಟ್ಟಿ, ಆರ್.ಕೆ. ಜಗದೀಶ, ಚನ್ನಬಸಯ್ಯ ನಂದಿಕೋಲಮಠ, ಆನಂದ ದಂಡೋತಿ, ಬಸವರಾಜ ಹಡಗಿಲ್, ಭಾರತಿ ಪಾಟೀಲ್, ಸುಜಾತಾ ಪಾಟೀಲ್, ಸವಿತಾ ಸಜ್ಜನ, ರೇಣುಕಾ ಖಾನಾಪುರ ಇತರರಿದ್ದರು.

ಕಡೇಚೂರಿನಲ್ಲಿ ಫಾರ್ಮ್​ ಪಾರ್ಕ್​ ಸ್ಥಾಪನೆ
ಹುಬ್ಬಳ್ಳಿ ಸಮಾವೇಶದ ಫಲವಾಗಿಯೇ ಯಾದಗಿರಿ ಜಿಲ್ಲೆ ಕಡೇಚೂರ ಕೈಗಾರಿಕಾ ಪ್ರದೇಶದಲ್ಲಿ 15 ಫಾರ್ಮ ಉದ್ಯಮಗಳ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದ್ದು,
ಫಾರ್ಮ್​ ಪಾರ್ಕ್ ಸ್ಥಾಪನೆಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಜತೆ ಚಚರ್ಿಸಿ ಶೀಘ್ರದಲ್ಲಿ ಅನುಮೋದನೆ ಪಡೆಯಲಾಗುವುದು. ನೆರೆಯ ಹೈದರಾಬಾದ್ನಲ್ಲಿರುವ ಹಲವು ಔಷಧ ಕಂಪನಿಗಳು ಕಡೇಚೂರಿನಲ್ಲಿ ತಮ್ಮ ಘಟಕ ಆರಂಭಿಸಲು ಮುಂದೆ ಬಂದಿವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಕೈಗಾರಿಕೆಗಳು ಯಾದಗಿರಿ ಜಿಲ್ಲೆಯಲ್ಲಿ ಸ್ಥಾಪನೆಯಾಗಲಿವೆ ಎಂದು ಸಚಿವ ಶೆಟ್ಟರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net